Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್ ಆಗಿದೆ – ಆರ್ ಅಶೋಕ್

ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ವರದಿಗೆ ಸಂಬಂಧಪಟ್ಟಂತೆ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಅವರು, ಸಿಎಂ ಹುದ್ದೆಗೆ ರಾಹುಲ್‌ ಗಾಂಧಿ ಎಷ್ಟು ರೇಟ್‌ ಫಿಕ್ಸ್‌ ಮಾಡಿದ್ದಾರೆ ಸಿದ್ದರಾಮಯ್ಯನವರೇ ಎಂದು ಮುಖ್ಯಮಂತ್ರಿಯನ್ನು ಪ್ರಶ್ನೆ ಮಾಡಿದ್ದಾರೆ.  ವರ್ಗಾವಣೆ ದಂಧೆಗೆ ರೇಟ್‌ ಫಿಕ್ಸ್‌ ಆಗಿದೆ. ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಷ್ಟು ಸಾಂಸ್ಥಿಕ ರೂಪ ಪಡೆದಿದೆ ಅಂದರೆ ಅಬಕಾರಿ ಇಲಾಖೆಯಲ್ಲಿ ಪೇದೆಯಿಂದ ಹಿಡಿದು ಉಪ ಆಯುಕ್ತ ಹುದ್ದೆಯವರಿಗೆ ೫ ಲಕ್ಷ ರೂಪಾಯಿಯಿಂದ ೩.೫ ಕೋಟಿ ರೂಪಾಯಿ ವರೆಗೆ ಲಂಚ ಫಿಕ್ಸ್‌ ಆಗಿದೆ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ಜೋರಾಗಿದೆ ಎಂದು ಪತ್ರಿಕಾ ವರದಿಯೊಂದನ್ನು ಅವರು ಲಗತ್ತಿಸಿದ್ದಾರೆ. ವರದಿಯ ಪ್ರಕಾರ ವರ್ಗಾವಣೆ ಅಬಕಾರಿ ಇಲಾಖೆಯ ಉಪ ಆಯುಕ್ತರ ಹುದ್ದೆಗೆ ೨.೫ ಕೋಟಿ ರೂ ನಿಂದ ೩.೫ ಕೋಟಿ ರೂ ಫಿಕ್ಸ್‌ ಆಗಿದೆ. ಅಧೀಕ್ಷಕರ ಹುದ್ದೆಗೆ ೫ ರಿಂದ ೩೫ ಲಕ್ಷ , ಉಪ ಅಧೀಕ್ಷಕ ಹುದ್ದೆಗೆ ೩೦ ರಿಂದ ೪೦ ಲಕ್ಷ, ಅಬಕಾರಿ ನಿರೀಕ್ಷಕ ಹುದ್ದೆಗೆ ೪೦ ರಿಂದ ೫೦ ಲಕ್ಷರೂ ಹಾಗೂ ನಿರೀಕ್ಷಕ ಹುದ್ದೆಗೆ ೧೫ ರಿಂದ ೨೦ ಲಕ್ಷ, ಮುಖ್ಯ ಪೇದೆ ಹುದ್ದೆಗೆ ೮ ರಿಂದ ೧೦ ಲಕ್ಷ ರೂ ಹಾಗೂ ಅಬಕಾರಿ ಪೇದೆಗೆ ೫ ರಿಂದ ೮ ಲಕ್ಷ ಲಂಚ ಫಿಕ್ಸ್‌ ಆಗಿದೆ. ಸಚಿವ ಕೆ ಹೆಚ್‌ ಮುನಿಯಪ್ಪ ಅಳಿಯನಿಗಾಗಿ ಸರ್ಕಾರ ಕಾರ್ಯದರ್ಶಿ ೨ ಹುದ್ದೆ ಸೃಷ್ಟಿಸಲು ಮುಂದಾಗಿದೆ ಎಂಬ ವರದಿಯನ್ನ ಉಲ್ಲೇಖಿಸಿ ಅಶೋಕ್ ವಾಗ್ದಾಳಿ ನಡೆಸಿದ್ದಾರೆ

ಜೊತೆಗೆ ಸಿಎಂ ಸಿದ್ದರಾಮಯ್ಯನವರೇ ಶಾಸಕರನ್ನು, ಸಚಿವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ ಸಾರ್ವಜನಿಕರ ಹಣ ಪೋಲು ಮಾಡಿ ಶಾಸಕರಿಗೆ , ಸಚಿವರ ಸಂಬಂಧಿಗಳಿಗೆ ಬೇಕಾಬಿಟ್ಟಿ ಸ್ಥಾನಮಾನ ನೀಡುತ್ತಿರುವ ನೀವು ಕರ್ನಾಟಕ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಅಂದರೆ ತಪ್ಪಾಗಲಾರದು. ಇನ್ನೆಷ್ಟು ದಿನ ಈ ಭಂಡ ಬಾಳು. ಜನ ನಿಮ್ಮ ವಿರುದ್ಧ ದಂಗೆ ಏಳುವ ಮುನ್ನ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ ಎಂದು ಕಿಡಿಕಾರಿದ್ದಾರೆ.‌

Tags: