Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ತರುಣ್ ಸುಧೀರ್ ಮತ್ತು ಸೋನಲ್ ವಿವಾಹ ಮುಹೂರ್ತ ಫಿಕ್ಸ್

ಬೆಂಗಳೂರು : ಸ್ಯಾಂಡಲ್‌ ವುಡ್‌ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಸೋನಲ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಪ್ರೀ-ವೆಡ್ಡಿಂಗ್‌ ವಿಡಿಯೋ ಹಂಚಿಕೊಳ್ಳಲಾಗಿದೆ.

ಈ ವಿಡಿಯೋವನ್ನು ಚಿತ್ರಮಂದಿರದಲ್ಲಿ ಶೂಟ್‌ ಮಾಡಲಾಗಿದ್ದು. ಇಬ್ಬರೂ ಗಮನ ಸೆಳೆದಿದ್ದಾರೆ. ಕಪ್ಪು ಬಣ್ಣ ಮತ್ತು ಲೈಟ್‌ ಬಣ್ಣದ ಉಡುಗೆಯಲ್ಲಿ ಚೆಂದದ ಫೋಟೋಶೂಟ್‌ ಮಾಡಿಸಿ ಮದುವೆ ಬಗ್ಗೆ ಇಬ್ಬರೂ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ವದಂತಿಗಳಿಗೆ ತರುಣ್‌ ಮತ್ತು ಸೋನಲ್‌ ತೆರೆ ಎಳೆದಿದ್ದಾರೆ. ಇದೇ ಆಗಸ್ಟ್‌ ೧೦ ರಂದು ಸೋನಲ್‌ ಮತ್ತು ತರುಣ್‌ ಸುಧೀರ್‌ ಆರತಕ್ಷತೆ, ಆಗಸ್ಟ್‌ ೧೧ ರಂದು ಮದುವೆ ನಡೆಯಲಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್‌ ಹಾಲ್‌ ನಲ್ಲಿ ವಿವಾಹ ನಡೆಯಲಿದೆ.

ಇನ್ನು ಇವರಿಬ್ಬರ ಪ್ರೀ ವೆಡ್ಡಿಂಗ್‌ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಎಲ್ಲಾ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಜೊತೆಗೆ ಇಬ್ಬರಿಗೂ ಕಾಮೆಂಟ್‌ ಮೂಲಕ ಶುಭಾಶಯ ಕೋರುತ್ತಿದ್ದಾರೆ.

Tags: