ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ೨೪ ಗಂಟೆ ಅವಧಿಯಲ್ಲಿ ೪೮೬ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಕ್ಯಾನ್ಸರ್, ಹೃದಯ ಸಮಸ್ಯೆ, ಥೈರಾಯ್ಡ್ , ಹೈಪರ್ ಟೆನ್ಷನ್ , ಬಿಪಿ, ಹಾಗೂ ಶುಗರ್ ಸಮಸ್ಯೆಯಿಂದ ಬಳಲುತ್ತಿರುವವರ ಜೀವ ನುಂಗಲು ಹೆಮ್ಮಾರಿ ಹೊಂಚು ಹಾಕುತ್ತಿದೆ. ಈಗಾಗಲೇ ಡೆಂಗ್ಯೂ ಜ್ವರ ಬಂದಿರುವವರಿಗೆ ಮತ್ತೆ ಸೊಳ್ಳೆ ಕಚ್ಚಿದರೆ ಅದರ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಡೆಂಗ್ಯೂ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಪ್ಲಾನ್ ಮಾಡಿಕೊಳ್ಳಲಾಗಿದೆ.
ಡೆಂಗ್ಯೂ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳು ಸೊಳ್ಳೆ ಪರದೆಯ ಮೊರೆ ಹೋಗಿದ್ದು, ಡೆಂಗ್ಯೂ ರೋಗಿಗಳ ಸೋಂಕಿನ ತೀವ್ರತೆ ತಡೆಯಲು ಸೊಳ್ಳೆ ಪರದೆ ಬಳಕೆ ಮಾಡುತ್ತಿವೆ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರಿಗೆ ಗುಣಮುಖರಾಗುವ ಹೊತ್ತಿನಲ್ಲಿ ಮತ್ತೆ ಡೆಂಗ್ಯೂ ಸೊಳ್ಳೆ ಕಚ್ಚಿದರೆ ಸೋಂಕು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಈಗಾಗಿ ಈ ಮಾಸ್ಟರ್ ಪ್ಲಾನ್ ಅನ್ನು ಮಾಡಿಕೊಂಡಿವೆ.
ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೆಂಗ್ಯೂ ಆಸ್ಪತ್ರೆಗಳಿಂದ ಹರಡದಂತೆ ಹಾಗೂ ಸೊಳ್ಳೆಗಳು ಬರದಂತೆ ತಡೆಯಲು ವಾರ್ಡ್‌ಗಳಿಗೆ ಹಾಗೂ ಜ್ವರದ ಪ್ರಕರಣಗಳಿಂದ ದಾಖಲಾದ ರೋಗಿಗಳಿಗೆ ಬಡ್ ಜೊತೆಗೆ ಸೊಳ್ಳೆ ಪರದೆ ಹಾಕಲಾಗಿದೆ. ಅಲ್ಲದೆ ಆಸ್ಪತ್ರೆಗೆ ಬರುವ ಇತರೆ ರೋಗಿಗಳು ಹಾಗೂ ಜನರಿಗೂ ಡೆಂಗ್ಯೂ ಹರಡದಂತೆ ರಕ್ಷಣೆ ನೀಡಲು ಸೊಳ್ಳೆ ಔಷಧ ನಿಯಂತ್ರಕ ರಿಪ್ಲೀಕೆಂಟ್ ಅಳವಡಿಸಿದೆ.