Mysore
24
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚೌಳಗೆರೆಯಲ್ಲಿ ಟೋಲ್ ನಲ್ಲಿ ಶುಲ್ಕ ವಸೂಲಿಗೆ ಸಿದ್ಧತೆ ; ಪ್ರಾಧಿಕಾರದ ವಿರುದ್ಧ ಜನರ ಆಕ್ರೋಶ

ಹಾಸನ  : ಆಲೂರು ತಾಲೂಕಿನ ಚೌಳಗೆರೆಯಲ್ಲಿ ಟೋಲ್‌ ನಿರ್ಮಿಸಿ ಶುಲ್ಕ ವಸೂಲಿಗೆ ಸಿದ್ಧತೆ ನಡೆಸಿರುವುದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಾಸನ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಎಚ್‌ ಎಚ್‌ -೭೫ ಕಾಮಗಾರಿ ಇನ್ನು ಪೂರ್ಣಗೊಳ್ಳದೆ ಕುಟುಂತ್ತಾ ಸಾಗುತ್ತಿದೆ. ಅಲ್ಲಲ್ಲಿ ಸೀಳು ಬಿಟ್ಟಿದೆ, ಮಣ್ಣು ಕುಸಿಯುತ್ತಿದೆ. ಈ ಕಾಮಗಾರಿ ಯಾವಾಗ ಮುಗಿಯುವುದು..?  ಇದರ ನಡುವೆ ಬೈರಾಪುರದಲ್ಲಿ ಗೋಡೆ ಹಾಗೂ ಸೇತುವೆ ಅಪಾಯದ ಸ್ಥಿತಿಯಲ್ಲಿದೆ. ಕಳಪೆ ಕಾಮಗಾರಿಯನ್ನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದರು.

ಅಲ್ಲದೆ ಇದು ಕೇವಲ ಸಾರ್ವಜನಿಕರ ಆರೋಪವಲ್ಲ, ಜನಪ್ರತಿನಿಧಿಗಳಿಂದಲೂ ಕಳಪೆ ಕಾಮಗಾರಿ ಆರೋಪ ಕೇಳಿಬರುತ್ತಿದೆ. ಇದಿಷ್ಟೇ ಅಲ್ಲ ಜಿಲ್ಲೆಯಲ್ಲಿ ಸಾಕಷ್ಟು ಅವೈಜ್ಷಾನಿಕ ಕಾಮಗಾರಿ ನಡೆಸುತ್ತಿರುವುದು ಕಾಣುತ್ತಿದೆ. ಇಷೆಲ್ಲಾ ಸಮಸ್ಯೆಗಳ ಕಣ್ಣೇದುರೇ ಹೆದ್ದಾರಿ ಪ್ರಾಧಿಕಾರ ಚೌಳಗೆರೆ ಬಳಿ ಆತುರಾತುರದಲ್ಲಿ ಟೋಲ್‌ ನಿರ್ಮಿಸಿ ಶುಲ್ಕ ವಸೂಲಿಗೆ ಸಿದ್ಧತೆ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ. ಕೂಡಲೇ ಇದನ್ನ ನಿಲ್ಲಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಜನರು ಎಚ್ಚರಿಕೆ ನೀಡಿದ್ದಾರೆ.

Tags: