Mysore
21
scattered clouds

Social Media

ಶುಕ್ರವಾರ, 03 ಏಪ್ರಿಲ 2026
Light
Dark

ಕೋವಿಡ್‌ನಿಂದ ಭಾರತೀಯರ ಆಯಸ್ಸು 2.6 ವರ್ಷ ಕಡಿತ.? ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದಿಷ್ಟು

ನವದೆಹಲಿ: ಕೊರೊನಾ ಮಹಾಮಾರಿ ವಕ್ಕರಿಸಿದ ಬಳಿಕ ಭಾರತೀಯರ ಆಯಸ್ಸು 2.6 ವರ್ಷ ಕಡಿತಗೊಂಡಿದೆ ಎಂಬ ಅಧ್ಯಯನ ವರದಿ ಭಾರೀ ಆತಂಕ ಸೃಷ್ಟಿಸಿದೆ.

ಈ ಅಧ್ಯಯನ ವರದಿ ಬೆನ್ನಲ್ಲೇ ದೇಶದ ಜನತೆ ಭಾರೀ ಆತಂಕಕ್ಕೆ ಈಡಾಗಿದ್ದರು. ವರದಿ ಬರುವುದಕ್ಕೂ ಮೊದಲೇ ಭಾರತದಲ್ಲಿ ಸಾಕಷ್ಟು ದಿಢೀರ್‌ ಸಾವಿನ ಪ್ರಕರಣಗಳು ದಾಖಲಾಗುತ್ತಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಕೊರೊನಾ ವೈರಸ್‌ ಮಹಾಮಾರಿ ವಿಶ್ವದಾದ್ಯಂತ ಸೃಷ್ಟಿಸಿದ ಅವಾಂತರಗಳು ಬಹಳಷ್ಟು. ಕೊರೊನಾ ಆರ್ಭಟಕ್ಕೆ ದೇಶದಾದ್ಯಂತ ಸಾವಿರಾರು ಜನರು ಮೃತಪಟ್ಟಿದ್ದು, ಅನೇಕ ಮಕ್ಕಳು ಅನಾಥರಾಗಿದ್ದಾರೆ.

ಇದರ ನಡುವೆ ಕೊರೊನಾ ವಕ್ಕರಿಸಿದ ಜನರಿಗೆ 2.6 ವರ್ಷ ಆಯಸ್ಸು ಕಡಿಮೆ ಎಂದು ಅಧ್ಯಯನವೊಂದು ಸ್ಫೋಟಕ ಮಾಹಿತಿ ನೀಡಿದೆ. ಈ ವರದಿಗೆ ಕೇಂದ್ರ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಅಧ್ಯಯನದ ವರದಿಯನ್ನು ಅಲ್ಲಗೆಳೆದಿದೆ.

ಈ ವರದಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಭಾರತದ ಜನಸಂಖ್ಯೆ, ಆರೋಗ್ಯ, ಕೊರೊನಾ ಪ್ರಕರಣ ಸೇರಿದಂತೆ ಹಲವು ಮಾಹಿತಿಗಳನ್ನು ಆಧರಿಸಿ ಈ ವರದಿ ತಯಾರಾಗಿಲ್ಲ. ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

 

Tags:
error: Content is protected !!