Mysore
29
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಸೈಬರ್ ಕ್ರೈಂಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯಿಂದ ಸಹಾಯವಾಣಿ ಆರಂಭ

ಬೆಂಗಳೂರು : ರಾಜ್ಯದಲ್ಲಿ ಸೈಬರ್‌ ಕ್ರೈಂಗಳ ಹಾವಳಿ ಹೆಚ್ಚಾಗುತ್ತಿದ್ದು, ಪ್ರತಿವರ್ಷ ಏನಿಲ್ಲಾ ಅಂದ್ರೂ ೧೦ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್‌ ವಂಚಕರ ಜಾಲಕ್ಕೆ ಬಿದ್ದು, ಜನರು ಲಕ್ಷಾಂತರ ರೂಪಾಯಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಸೈಬರ್‌ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಇದೀಗ ರಾಜ್ಯ ಪೊಲೀಸ್‌ ಇಲಾಖೆ ೧೯೩೦ ಎಂಬ ಸಹಾಯವಾಣಿ ಆರಂಭಿಸಿದೆ.

ಈ ಕುರಿತು ಟ್ವೀಟ್‌ ಮಾಡಿದ ರಾಜ್ಯ ಪೊಲೀಸ್‌ ಇಲಾಖೆ, ʻಆತ್ಮೀಯ ಆನ್‌ ಲೈನ್‌ ಬಳಕೆದಾರರೇ ಸೈಬರ್‌ ವಂಚನೆಯಿಂದ ದೂರ ಇರಲು ನಿಮ್ಮ ನಡೆಯ ಯಾವುದೇ ಸುಳಿವು ವಂಚಕರಿಗೆ ನೀಡಬೇಡಿ. ಒಂದು ವೇಳೆ ನೀವು ಸೈಬರ್‌ ಬಲೆಯಲ್ಲಿ ಸಿಲುಕಿದ್ದರೆ ಹತ್ತಿರದ ಪೊಲೀಸ್‌ ಠಾಣೆಗೆ ದೂರು ನೀಡಿ. ಅಥವಾ ಸೈಬರ್‌ ಕ್ರೈಂ ಸಹಾಯವಾಣಿ ೧೯೩೦ ಗೆ ಕರೆ ಮಾಡಿ ಎಂದು ಟ್ವೀಟ್‌ ಮಾಡಿದ್ದಾರೆ.

Tags: