Mysore
21
mist

Social Media

ಶುಕ್ರವಾರ, 02 ಜನವರಿ 2026
Light
Dark

ಮಳೆಗೆ ಮನೆಗೋಡೆ ಕುಸಿದು ಬಾಣಂತಿ ಸಾವು ; ತಾಯಿ ಇಲ್ಲದೆ ತಬ್ಬಲಿಯಾದ ಮಗು

ಮೈಸೂರು : ಕರ್ನಾಟಕದ ಹಲವೆಡೆ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ  ಮಳೆಯಿಂದಾಗಿ ಒಂದಲ್ಲ ಒಂದು ಅವಾಂತರಸೃಷ್ಠಿಯಾಗುತ್ತಿವೆ. ಮೈಸೂರು ಜಿಲ್ಲೆಯಲ್ಲಿ ಮಳೆಗೆ ಮನೆಗೋಡೆ ಕುಸಿದು ಬಾಣಂತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಅಬ್ಬರ ಜೋರಾಗಿದ್ದು, ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದು ಬಿದ್ದಿದೆ. ೨೨ ವರ್ಷದ ಹೇಮಲತಾ ಮೃತ ದುರ್ದೈವಿಯಾಗಿದ್ದು, ಅದೃಷ್ಠವಶಾತ್‌ ಮಗು ಪ್ರಾಣಾಪಾಯದಿಂದ ಪಾರಾಗಿದೆ.

Tags:
error: Content is protected !!