Mysore
25
broken clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಜು. 20ರಂದು ನೀಟ್‌-ಯುಜಿ ಫಲಿತಾಂಶ ಪ್ರಕಟಿಸಿ: ಎನ್‌ಟಿಎಗೆ ಸುಪ್ರೀಂ ಚಾಟಿ

ನವದೆಹಲಿ: 2024ರ ಸಾಲಿನ ನೀಟ್‌-ಯುಜಿ ಪರೀಕ್ಷಾ ಫಲಿತಾಂಶಗಳನ್ನು ಇದೇ ಶನಿವಾರ (ಜು.20) ಮದ್ಯಾಹ್ನ 12ಗಂಟೆ ಒಳಗಾಗಿ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ)ಗೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ಹೊರಡಿಸಿದೆ.

ಪ್ರಕಟಣೆ ವೇಳೆಯಲ್ಲಿ ಯಾವುದೇ ಅಭ್ಯರ್ಥಿಯ ಗುರುತನ್ನು ಬಹಿರಂಗಪಡಿಸಬಾರದು ಹಾಗೂ ನಗರವಾರು ಮತ್ತು ಕೇಂದ್ರಾವಾರು ಫಲಿತಾಂಶ ಪ್ರಕಟಣೆಗೆ ಸುಪ್ರೀಂ ಆದೇಶಿಸಿದೆ.

ನೀಟ್‌-ಯುಜಿ ಅಕ್ರಮದಲ್ಲಿ ಭಾಗಿಯಾಗಿರುವ ಬಗೆಗಿನ ಸುಮಾರು 40 ಕ್ಕೂ ಅಧಿಕ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಶನಿವಾರ ನಗರವಾರು ಫಲಿತಾಂಶ ಪ್ರಕಟಿಸಬೇಕು. ಇದರಿಂದ ಕೇಂದ್ರಾವಾರು ದೊರೆಯಲಿರುವ ಮಾರ್ಕ್ಸ್‌ ಪ್ಯಾಟ್ರನ್‌ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಆಭಿಪ್ರಾಯಪಟ್ಟಿತು.

Tags:
error: Content is protected !!