Mysore
22
overcast clouds

Social Media

ಶನಿವಾರ, 03 ಜನವರಿ 2026
Light
Dark

ಓದುಗರ ಪತ್ರ| ಕೆಸರು ಗದ್ದೆಯಂತಾದ ರಸ್ತೆಗಳು

ಎಚ್.ಡಿ.ಕೋಟೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲ ಮನೆಗಳಿಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಪೈಪ್‌ಲೈನ್ ಅಳವಡಿಸಲಾಗು ತ್ತಿದೆ. ಈ ಪೈಪ್‌ಲೈನ್ ಅಳವಡಿಸುವ ಸಲುವಾಗಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲ ರಸ್ತೆಗಳ ಎರಡೂ ಅಂಚುಗಳನ್ನು ಅಗೆಯಲಾಗಿದೆ. ಹೀಗೆ ಅಗೆದ ಗುಂಡಿಗಳನ್ನು ಮಣ್ಣಿನಿಂದ ಮುಚ್ಚಲಾಗಿದ್ದು, ಮೇಲೆ ಸಿಮೆಂಟ್ ಅಥವಾ ಡಾಂಬರು ಹಾಕದ
ಪರಿಣಾಮ ರಸ್ತೆಗಳು ಕೆಸರುಮಯವಾಗಿವೆ. ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ಈಗ ಮಳೆಗಾಲವಾದ್ದರಿಂದ ಈ ರಸ್ತೆಗಳು ಸಂಪೂರ್ಣ ಕೆಸರಿನ ಗದ್ದೆಗಳಂತಾಗಿದ್ದು, ಪಾದಚಾರಿಗಳಿಗೆ ಜಾರಿ ಬೀಳುವ ಅಪಾಯ ಎದುರಾಗಿದೆ. ಅಲ್ಲದೆ ಅಲ್ಲಲ್ಲಿ ಗುಂಡಿಗಳೂ ನಿರ್ಮಾಣವಾಗಿವೆ.

ಇನ್ನು ಕೆಲ ಭಾಗಗಳಲ್ಲಿ ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದಾಗಿ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ಗುಂಡಿ ಕಾಣದೆ ವಾಹನ ಸವಾರರು ಬಿದಿರುವ ಉದಾಹರಣೆಗಳಿವೆ.

ಸದ್ಯ ಅಂತರಸಂತೆ ಗ್ರಾಮದಲ್ಲಿಯೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮದ ಎಲ್ಲ ರಸ್ತೆಗಳನ್ನೂ ಅಗೆದು ಹಾಕಲಾಗಿದೆ. ಮಾರ್ಚ್‌ನಲ್ಲಿಯೇ ಆರಂಭವಾದ ಈ ಜೆಜೆಎಂ ಕಾಮಗಾರಿ ಇನ್ನೂ ಮುಗಿಯದ ಕಾರಣ ಗ್ರಾಮಗಳ ರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಿದೆ. ಆದ್ದರಿಂದ ಸಂಬಂಧಪಟ್ಟವರು ಆದಷ್ಟು ಬೇಗ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಅಗೆದ ರಸ್ತೆಗಳಿಗೆ ಡಾಂಬರು ಅಥವಾ ಸಿಮೆಂಟ್ ಹಾಕಬೇಕಿದೆ.

-ಪ್ರಶಾಂತ್, ಅಂತರಸಂತೆ, ಎಚ್.ಡಿ.ಕೋಟೆ ತಾ.

Tags:
error: Content is protected !!