Mysore
15
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ನಾನು ನೋಡಿದ ಹಳೇ ಸಿದ್ದರಾಮಯ್ಯ ಕಳೆದುಹೋಗಿದ್ದಾರೆ ; ಸಚಿವ ವಿ.ಸೋಮಣ್ಣ

ಮಂಗಳೂರು : ನಾನು ಸಿದ್ದರಾಮಯ್ಯ ಜೊತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಹಳೇ ಸಿದ್ದರಾಮಯ್ಯ ಹೀಗಿರಲಿಲ್ಲ. ಸಿಎಂ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ ಮಾಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಮತ್ತು ಮುಡಾ ಹಗರಣ ಕುರಿತು ಮಾತನಾಡಿದ ಸಚಿವರು, ʻಸಿಎಂ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ಹಳೇ ಸಿದ್ದರಾಮಯ್ಯ ಹೀಗಿರಲಿಲ್ಲ. ನಾನು ಸಿದ್ದರಾಮಯ್ಯ ಜೊತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಇವತ್ತು ಇರುವ ಸಿದ್ದರಾಮಯ್ಯನವರ ವರ್ತನೆ ನೋಡಿದರೆ ನನಗೂ ಒಂದು ರೀತಿ ಅನುಮಾನ ಮೂಡಿದೆ. ವಾಸ್ತವ ಯಾರೂ ಮುಚ್ಚಿಡಲು ಆಗಲ್ಲ. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಯಾರು ತಿಳಿದುಕೊಳ್ಳಬಾರದು. ಸಿದ್ದರಾಮಯ್ಯ ತಪ್ಪು ತಿದ್ದಿಕೊಂಡು ಜನರಿಗೆ ವಾಸ್ತವಾಂಶ ಏನೆಂದು ತಿಳಸಬೇಕು. ಆಗ ಅವರು ಹಳೆ ಸಿದ್ದರಾಮಯ್ಯ ಆಗುತ್ತಾರೆʼ ಎಂದು ಲೇವಡಿ ಮಾಡಿದರು.

Tags:
error: Content is protected !!