Mysore
32
broken clouds

Social Media

ಶನಿವಾರ, 21 ಫೆಬ್ರವರಿ 2026
Light
Dark

ಭಾರೀ ಮಳೆಗೆ ಮನೆಯ ಮೇಲೆ ಬಿದ್ದ ಮರ ; ಮೂವರಿಗೆ ಗಾಯ

ಚಿಕ್ಕಮಗಳೂರು : ಕಳೆದ ಎರಡು ವಾರದಿಂದ ಬಿಟ್ಟೂ ಬಿಡದೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲದೆ ಮಳೆಯಿಂದ ಒಂದಲ್ಲ ಒಂದು ಅವಾಂತರಗಳು ಕೂಡ ಸೃಷ್ಠಿಯಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮಪಂಚಾಯತ್‌ ವ್ಯಾಪ್ತಿಯ ಕೇಳಗೂರು ಗ್ರಾಮದಲ್ಲಿ ಮೂಲೇಮನೆ ಎಸ್ಟೇಟ್‌ ಕೂಲಿ ಲೈನ್‌ ಮೇಲೆ ನಿನ್ನೆ ರಾತ್ರಿ ಮರ ಬಿದ್ದಿದ್ದು, ಅದೃಷ್ಠವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿದಲ್ಲ. ಇನ್ನು ಘಟನೆಯಿಂದ ಮೂರು ಜನರಿಗೆ ಗಾಯವಾಗಿದ್ದು, ತಕ್ಷಣವೇ ಗಾಯಾಳುಗಳನ್ನ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗಿದೆ.

 

Tags:
error: Content is protected !!