Mysore
28
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಕಬಿನಿ ಡ್ಯಾಂನಿಂದ ೨೫ ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಮೈಸೂರು : ಕೇರಳದ ವೈನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಮೈಸೂರು ಜಿಲ್ಲೆಯ ಎಚ್‌ ಡಿ ಕೋಟೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದೆ.

ದಿನೇ ದಿನೇ ಜಲಾಶಯದ ಒಳಹರಿವು ಹೆಚ್ಚಳವಾಗುತ್ತಿರುವ ಕಾರಣ ಇಂದು ೪ ಕ್ರಸ್ಟ್‌ ಗೇಟ್‌ ತೆರೆದು ೨೫ ಸಾವಿರ ಕ್ಯೂಸೆಕ್‌ ನೀರನ್ನ ಹೊರ ಬಿಡಲಾಗುತ್ತಿದೆ. ನಿನ್ನೆಯಷ್ಟೆ ೧೫ ಸಾವಿರ ಕ್ಯೂಸೆಕ್‌ ನೀರು ಹೊರಕ್ಕೆ ಬಿಡಲಾಗಿತ್ತು. ಜಲಾಶಯದ ಗರಿಷ್ಟ ಮಟ್ಟ ೨೨೮೪ ಅಡಿ ಆಗಿದ್ದು, ಇಂದಿನ ನೀರಿನ ಮಟ್ಟ ೨೨೮೩ ಅಡಿ ಇದೆ. ಒಳಹರಿವು ೨೦೨೧೭ ಕ್ಯೂಸೆಕ್‌ ಇದೆ. ೨೫ ಸಾವಿರ ಕ್ಯೂಸೆಕ್‌  ನೀರು ಬಿಡುಗಡೆ ಮಾಡಿದ ಪರಿಣಾಮ ಹಲವು ಸಣ್ಣ ಸೇತುವೆಗಳು ಮುಳುಗಡೆಯಾಗಿದೆ.

Tags:
error: Content is protected !!