Mysore
26
few clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಕೆ.ಆರ್.ಎಸ್ ಜಲಾಶಯಕ್ಕೆ ೨೫೦೦೦ ಕ್ಯೂಸೆಕ್ ಗೂ ಅಧಿಕ ನೀರು

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿರುವ ಹಿನ್ನೆಲೆ  ಮಂಡ್ಯ ಜಿಲ್ಲೆಯ  ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್‌ ಎಸ್‌ ಜಲಾಶಯಕ್ಕೆ ೨೫ ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿದು ಬಂದಿದೆ. ಇದರಿಂದ ಮತ್ತೆ ರೈತರ ಜೀವನಾಡಿ ಕೆಆರ್‌ ಎಸ್‌ ಜಲಾಶಯಕ್ಕೆ ಜೀವಕಳೆ ಬಂದಿದೆ.

ಸೋಮವಾರ ಬೆಳಿಗ್ಗೆ ೧೦೧೩೧ ಕ್ಯುಸೆಕ್‌ ನೀರು ಹರಿದು ಬರುತ್ತು. ಸಂಜೆ ವೇಳೆಗೆ ೧೯೨೦೨  ಕ್ಯೂಸೆಕ್‌ ಏರಿಕೆಯಾಗಿತ್ತು. ಇಂದು ಒಳಹರಿವು ೨೫೯೩೩ ಕ್ಯೂಸೆಕ್‌ ಗೆ ಏರಿಕೆಯಾಗಿದ್ದು ಸಂಜೆ ವೇಳೆ ೩೦೦೦೦ ಕ್ಯೂಸೆಕ್‌ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ೨೪ ಗಂಟೆಯಲ್ಲಿ ೨ ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಇದೀಗ ೧೦೭.೬೦ ಅಡಿಯಷ್ಟು ಕೆಆರ್‌ ಎಸ್‌ ಡ್ಯಾಂ ಭರ್ತಿಯಾಗಿದೆ.

Tags:
error: Content is protected !!