Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕಾವೇರಿ ವಿವಾದ: ಇಂದು ಸರ್ವಪಕ್ಷಗಳ ಸಭೆ ಕರೆದ ಸಿಎಂ ಸ್ಟಾಲಿನ್‌

ಚೆನ್ನೈ: ಕರ್ನಾಟಕದ ಜೀವನದಿ ಕಾವೇರಿ ಕಾವು ಬಹಳ ಜೋರಾಗಿದ್ದು, ಅಂತರಾಜ್ಯ ಬಿಕ್ಕಟ್ಟು ಬಗೆಹರಿಸುವ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ಮಂಗಳವಾರ (ಜು.16) ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಮೊನ್ನೆ ಅಷ್ಟೆ ಸಿಡಬ್ಲ್ಯೂಆರ್‌ಸಿ ಸೂಚಿಸಿದಂತೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಒಪ್ಪದ ಕರ್ನಾಟಕ ಸರ್ಕಾರದ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಮಂಗಳವಾರ ಶಾಸಕರ ಸರ್ವಪಕ್ಷಗಳ ಸಭೆ ಕರೆಯಲಾಗಿದೆ ಎಂದು ಸೋಮವಾರ ಸಿಎಂ ಎಂಕೆ ಸ್ಟಾಲಿನ್‌ ತಿಳಿಸಿದ್ದಾರೆ.

ಕಾವೇರಿ ನೀರು ಬಿಡುಗಡೆ ಸಂಬಂಧ ಕರ್ನಾಟಕ ಕೈಗೊಂಡ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ತಮಿಳುನಾಡು, ರಾಜ್ಯ ಸರ್ಕಾರದ ನೆಡಯನ್ನು ತೀವ್ರವಾಗಿ ವಿರೋಧಿಸಿದೆ.

ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ 75 ಸಾವಿರ ಟಿಎಂಸಿ ನೀರಿದೆ. ಆದರೆ ನಮ್ಮ ಮೆಟ್ಟೂರಿನಲ್ಲಿ ಕೇವಲ 13 ಸಾವಿರ ಟಿಎಂಸಿ ನೀರಿದ್ದು, ಹವಾಮಾನ ಇಲಾಖೆ ಸೂಚನೆ ಪ್ರಕಾರ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದರೂ ಸಹಾ ಕರ್ನಾಟಕ ನೀರು ಬಿಡಲು ಮುಂದಾಗಿಲ್ಲ. ಸಿಡಬ್ಲ್ಯೂಆರ್‌ಸಿ ನಿರ್ದೇಶನವನ್ನು ತಿರಸ್ಕರಿಸುವ ಮೂಲಕ ರಾಜ್ಯದ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ. ಇದನ್ನು ಎಂದಿಗೂ ಸಹಿಸಲಾಗದು ಎಂದು ಸ್ಟಾಲಿನ್‌ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: