Mysore
27
overcast clouds

Social Media

ಭಾನುವಾರ, 26 ಜುಲೈ 2026
Light
Dark

ನಾನು ಯಾರ ಸಂಪತ್ತನ್ನೂ ಹೊಡೆದು ಜೀವನ ಮಾಡಿಲ್ಲ: ಡಿಕೆಶಿಗೆ ಟಾಂಗ್‌ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ನಾನು ಏನೇ ಮಾಡಿದರೂ ಪ್ರಾಮಾಣಿಕವಾಗಿ ಮಾಡುತ್ತೇನೆ. ಡಿಕೆಶಿಯಂತೆ ಕಾನೂನು ವಿರೋಧಿ ಕೆಲಸ ಮಾಡಲ್ಲ ಎಂದು ಡಿಕೆಶಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟಾಂಗ್‌ ಕೊಟ್ಟಿದ್ದಾರೆ.

ಕಸದ ಟೆಂಡರ್‌ನಲ್ಲೂ ಕಿಕ್‌ ಬ್ಯಾಕ್‌ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ನಾವು ಕಸವನ್ನೂ ಹೊರುತ್ತೇವೆ. ಸಿನಿಮಾ ಡಬ್ಬನೂ ಹೋರುತ್ತೇವೆ. ಏನೇ ಕೆಲಸ ಮಾಡಿದ್ರೂ ಪ್ರಾಮಾಣಿಕವಾಗಿ ಮಾಡುತ್ತೇನೆ. ಡಿಕೆಶಿಯಂತೆ ಕಂಡ ಕಂಡವರ ಸಂಪತ್ತು ಹೊಡೆದು ಜೀವನ ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರಿಗೆ ಮಾಡಲು ಏನೂ ಕೆಲಸ ಇಲ್ಲ. ರಾಜ್ಯದ ಅಭಿವೃದ್ಧಿ ಕೆಲಸ ಬಿಟ್ಟು, ವೈಯಕ್ತಿಕ ಮಾತನಾಡೋದು ಸರಿಯಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಬಿಟ್ಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಸಂಪೂರ್ಣ ಖಾಲಿಯಾಗಿದ್ದು, ಯಾವ ಅಭಿವೃದ್ಧಿಗೂ ಹಣ ಇಲ್ಲ. ಮೊದಲು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಿ, ಆಮೇಲೆ ವೈಯಕ್ತಿಕ ಕೆಲಸಗಳ ಬಗ್ಗೆ ಮಾತನಾಡಿ ಎಂದು ಡಿಕೆಶಿಗೆ ಸಲಹೆ ನೀಡಿದರು.

 

 

Tags:
error: Content is protected !!