ಮೈಸೂರು : ಇಂದು ನಗರದ ಜೆಡಿಎಸ್ ಕಚೇರಿಗೆ ಬಿಜೆಪಿ ಸಂಸದ ಯದುವೀರ್ ಭೇಟಿ ನೀಡಿದ್ದು, ಕಚೇರಿಗೆ ಬಂದ ಯದುವೀರ್ ರನ್ನ ತೆನೆ ನಾಯಕರು ಸ್ವಾಗತಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರನ್ನ ಭೇಟಿ ಮಾಡಿದ ಬಳಿಕ ಗೆಲುವಿಗೆ ಸಹಕರಿಸಿದ ದಳಪತಿಗಳಿಗೆ ಯದುವೀರ್ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಅವರು, ಇನ್ನುಮುಂದೆ ನಿಮ್ಮೊಂದಿಗೆ ಸೇರಿ ಕೆಲಸ ಮಾಡುತ್ತೇನೆ. ಯಾವುದೇ ಸಮಸ್ಯೆಗಳು ಇದ್ದರೂ ಕೂಡ ನನ್ನ ಕಾರ್ಯಾಲಯಕ್ಕೆ ಬನ್ನಿ. ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿರುವುದು ಖುಷಿ ವಿಚಾರ. ಮಂಡ್ಯದಲ್ಲಿ ನಮ್ಮ ಮೈತ್ರಿಗಿಂತ ಕುಮಾರಸ್ವಾಮಿ ಅವರ ಕೆಲಸವನ್ನು ಜನರು ಮೆಚ್ಚಿದ್ದಾರೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಸೇರಿದಂತೆ ಜೆಡಿಎಸ್ ನ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.





