Mysore
29
few clouds

Social Media

ಗುರುವಾರ, 15 ಜನವರಿ 2026
Light
Dark

ಹಳೆ ಡಿಸಿ ಕಚೇರಿಗಳಿಗೆ ಆಧುನಿಕ ಸ್ಪರ್ಶ ನೀಡಲು ಪ್ರವಾಸೋದ್ಯಮ ಇಲಾಖೆ ನಿರ್ಧಾರ

ಮೈಸೂರು : ೧೨೯ ವರ್ಷಗಳಷ್ಟು ಹಳೆಯದಾದ ಡಿಸಿ ಕಚೇರಿ ಕಟ್ಟಡವನ್ನು ಸಂರಕ್ಷಿಸಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ತೀರ್ಮಾನಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಇತ್ತೀಚೆಗೆ ಹಳೆ ಜಿಲ್ಲಾಧಿಕಾರಿಗಳ ಕಚೇರಿಯನ್ನ ಸಿದ್ದಾರ್ಥನಗರದಲ್ಲಿರುವ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗ ಖಾಲಿ ಬಿದ್ದಿರುವ ಹಳೆ ಡಿಸಿ ಕಚೇರಿಯನ್ನ ಆಧುನಿಕ ಸ್ಪರ್ಶ ನೀಡಲು ಪ್ರವಾಸೋದ್ಯಮ ಇಲಾಖೆ ನಿರ್ಧಾರ ಮಾಡಿದೆ.

ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರತಿದಿನವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಹಳೆ ಡಿಸಿ ಕಚೇರಿಯನ್ನ ಆರ್ಟ್‌ ಗ್ಯಾಲರಿಯಾಗಿ ಪರಿವರ್ತನೆ ಮಾಡಲು ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ಸುಮಾರು ೪೫ ಕೋಟಿ ವೆಚ್ಚದಲ್ಲಿ ಹಳೆ ಡಿಸಿ ಕಚೇರಿ ಕಟ್ಟಡವನ್ನು ಸಂರಕ್ಷಿಸಲು ಎಲ್ಲಾ ತಯಾರಿ ನಡೆಯುತ್ತಿದೆ. ಡಿಸಿಯೊಂದಿಗೆ ಸಭೆ ನಡೆಸಿ ಶೀಘ್ರವೇ ಡಿಪಿಆರ್‌ ಸಿದ್ಧಪಡಿಸಲು ಪ್ರವಾಸೋಧ್ಯಮ ಇಲಾಖೆ ಚಿಂತನೆ ನಡೆಸಿದೆ.

Tags:
error: Content is protected !!