ಲಂಡನ್: ಪ್ರತಿಷ್ಠಿತ ಟೆನಿಸ್ ಪ್ರಶಸ್ತಿಗಳಲ್ಲಿ ಒಂದಾದ ವಿಂಬಲ್ಡನ್ 2024 ರ ಟ್ರೋಫಿಯನ್ನು ಕಾರ್ಲೋಸ್ ಅಲ್ಕರಾಜ್ ಅವರು ಅಲಂಕರಿಸಿದರು.
ಇಲ್ಲಿನ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಕೋಕ್ರೆಟ್ ಕ್ಲಬ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಕ್ ಅವರನ್ನು ಕೇವಲ ಮೂರು ಗಂಟೆಗಳಲ್ಲಿ ಸೋಲಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿ ಜಯಿಸಿದರು.
ಕಳೆದ ವರ್ಷ ವಿಂಬಲ್ಡನ್ ಫೈನಲ್‌ನಲ್ಲಿಯೂ ಕೂಡಾ ಜೋಕೋವಿಕ್ ಅವರನ್ನು ಸೋಲಿಸಿದ ಆಲ್ಕರಾಜ್ ಮೊದಲ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಕಾರ್ಲೋಸ್ ಅಲ್ಕರಾಜ್ ಅವರು ಜೋಕೋವಿಕ್ ಅವರನ್ನು 6-2, 6-2, 7-6 ನೇರ್ ಸೆಟ್‌ಗಳ ಮೂಲಕ ಸೋಲಿಸಿ ವಿಂಬಲ್ಡನ್ ಗೆದ್ದು ಬೀಗಿದರು. ಆ ಮೂಲಕ ಅವರು ತಮ್ಮ ವೃತ್ತಿ ಜೀವನದಲ್ಲಿ ನಾಲ್ಕನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದು ಬೀಗಿದರು.