Mysore
25
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ಮೈಸೂರು: ಚಾಮುಂಡಿ ದೇಗುಲಕ್ಕೆ ದರ್ಶನ್‌ ಫೋಟೋ ಹೊತ್ತು ತಂದ ಮಹಿಳೆ

ಮೈಸೂರು: ನಿನ್ನೆ(ಜು.12) ಆಷಾಢ ಮಾಸದ ಮೊದಲ ಶುಕ್ರವಾರವಾದ ಹಿನ್ನೆಲೆ ಚಾಮುಂಡೇಶ್ವರಿ ದರ್ಶನಕ್ಕೆ ಅಪಾರ ಜನರು ನೆರೆದಿದ್ದರು. ಅವರಲ್ಲೊಬ್ಬ ಮಹಿಳೆ ಮತ್ತು ಅವರ ಜೊತೆ ಬಂದಿದ್ದ ಇನ್ನೊಬ್ಬ ಮಹಿಳೆ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ ಫೋಟೋ ಹೊತ್ತು ಚಾಮುಂಡಿ ಸನ್ನಿಧಿಗೆ ಬಂದಿದ್ದರು.

ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸುವ ಉಮೇದಿನಲ್ಲಿದ್ದ ಆ ಅಭಿಮಾನಿ ಮಹಿಳೆಯರನ್ನು ಪೊಲೀಸರ ತಡೆದು ತರಾಟೆಗೆ ತೆಗೆದುಕೊಂಡರು.

ಫೋಟೋವನ್ನು ಒಳಗಡೆ ಒಯ್ಯುವಂತಿಲ್ಲ ಅಂತ ಪೊಲೀಸರು ಹೇಳಿದಾಗ ಮಹಿಳೆರಯರು ಪೊಲೀಸರೊಂದಿಗೆ ವಾದಕ್ಕಿಳಿದರು. ಆದ್ರೆ, ಪೊಲೀಸರು ನೀವು ಒಳಗಡೆ ಫೋಟೋ ಒಯ್ಯಕೂಡದು, ನಿಮ್ಮ ಹಠ ಸಾಧಿಸುವುದಾದರೇ ವಾಪಸ್ಸು ಹೋಗಿ ಎಂದಾಗ ಮಹಿಳೆಯರು ವಿಧಿಯಿಲ್ಲದೆ ಹಿಂದಕ್ಕೆ ಹೋದರು.

 

Tags:
error: Content is protected !!