Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಿದ್ದರಾಮಯ್ಯನವರೇ, ಏನು ಮಾಡಿಲ್ಲ ಅಂದ್ರೆ ಮುಡಾ ಹಗರಣ ಸಿಬಿಐ ತನಿಖೆಗೆ ಕೊಡಿ ; ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಎನು ಮಾಡಿಲ್ಲ ಅನ್ನೋದಾದ್ರೆ ಸಿದ್ದರಾಮಯ್ಯನವರೇ  ಪ್ರಕರಣದ ತನಿಖೆಯನ್ನ ಸಿಬಿಐಗೆ ಕೊಡಿ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ.

ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿಜಯನಗರದಲ್ಲಿ ಯಾಕೆ ನಿಮಗೆ ಸೈಟ್‌ ಕೊಟ್ಟಿದಾರೆ. ಈ ಬಗ್ಗೆ ನೀವು ೨೦೧೩ ಚುನಾವಣೆಯಲ್ಲಿ ಅಫಿಡೆವಿಟ್‌ ನಲ್ಲಿ ಮಾಹಿತಿ ಕೊಟ್ಟಿಲ್ಲ. ಸಿದ್ದರಾಮಯ್ಯ ೧೪ ಸೈಟ್‌ ಪಡೆದಿದ್ದಾರೆ, ಬಿಜೆಪಿಯವರು ಕೊಟ್ರು ಅಂತಾರೆ. ಅಕಸ್ಮಾತ್‌ ಬಿಜೆಪಿಯವರು ಕೊಟ್ಟಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಿ. ಸಿದ್ದರಾಮಯ್ಯ ನವರೇ ನಮ್ಮ ಸರ್ಕಾರದಲ್ಲಿ ಏನು ನಡೆಯುತ್ತಿದೆ. ನೀವು ಏನು ಮಾಡಿಲ್ಲ ಅಂದರೆ ಸಿಬಿಐ ತನಿಖೆಗೆ ಕೊಡಿ. ನಾವು ಪ್ರತಿಭಟನೆ ಮಾಡೋಕ್ಕೆ ಹೋದ್ರೆ ಪೊಲೀಸರಿಂದ ಬಂಧಿಸುತ್ತೀರಿ. ಸಂವಿಧಾನ ಹತ್ಯೆ ಮಾಡುವ ಕೆಲಸ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೆ ಒಂದೂವರೆ ವರ್ಷದಿಂದ ಸರ್ಕಾರ ಭಯಂಕರ ಭ್ರಷ್ಟಚಾರ ಎಸಗಿದೆ. ರಾಹುಲ್‌ ಗಾಂಧಿ, ಇನ್ನೀತರ ನಾಯಕರಿಂದ ಭಯಂಕರ ಭ್ರಷ್ಟಚಾರ ಶುರು ಆಗಿದೆ. ಅಹಿಂದ ಅಹಿಂದ ಎಂದುಕೊಂಡು ಎಸ್‌ ಸಿ –ಎಸ್‌ ಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ಕಡುಭ್ರಷ್ಟ ಅಪ್ರಾಮಾಣಿಕ. ವಾಲ್ಮೀಕಿ ನಿಗಮದ ಹಣ ನೂರಾರು ಜನರಿಗೆ ಟ್ಯಾನ್ಸ್ಫರ್‌ ಮಾಡಿದ್ದಾರೆ. ನಿನ್ನೆ ಕೆಲ ಅಧಿಕಾರಿಗಳು ಸಿಕ್ಕಿದ್ದರು. ಬೆಂಗಳೂರಿನಲ್ಲಿ ಕೆಲ ಪ್ರಮುಖ ಅಧಿಕಾರಿಗಳು ಸಿಕ್ಕಿದ್ದರು. ಎಲ್ಲಾ ಹಣ ಹೈದರಾಬಾದ ಕಂಪನಿಗಳಿಗೆ ಹಣ ಹೋಗಿದೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ ಗೆ ಗೊತ್ತಿದ್ದೆ ಮಾಡಿದ್ದು ಎಂದು ಆರೋಪಿಸಿದರು.

ಈ ಹಗರಣದ ಬಗ್ಗೆ ರಾಹುಲ್‌ ಗಾಂಧಿ ಇವತ್ತಿನವರೆಗೂ ಒಂದು ಮಾತಾಡಿಲ್ಲ. ಇದಕ್ಕೆ ರಾಹುಲ್‌ ಹಾಗೂ ಸಿದ್ದರಾಮಯ್ಯ ಇಬ್ಬರು ಜವಾಬ್ದಾರರು. ೪೦ ದಿನ ಆದರೂ ನಾಗೇಂದ್ರಗೆ ನೋಟಿಸ್‌ ಕೊಟ್ಟಿರಲಿಲ್ಲ. ಇಡಿ ಎಂಟ್ರಿ ಆದಾಗ ನೋಟಿಸ್‌ ಕೊಟ್ಟಿದ್ದಾರೆ. ಐಶಾರಾಮಿ ಹೋಟೆಲ್‌ ಗೆ ಕರೆದು ವಿಚಾರಣೆ ಮಾಡುವ ನಾಟಕ ಮಾಡಿದರು. ಐಷಾರಾಮಿ ಹೋಟೆಲ್‌ ಬಿಲ್‌ ಕಟ್ಟಿದ್ದು ಕೂಡ ಎಸ್‌ ಐಟಿ ಎಂದು ಕಿಡಿಕಾರಿದರು.

Tags: