‘ಆಂದೋಲನ’ ದಿನಪತ್ರಿಕೆಯ ಬುಧವಾರದ ಸಂಚಿಯ ಓದುಗರ ಪತ್ರ ವಿಭಾಗದಲ್ಲಿ ಅಂತರಸಂತೆಯಲ್ಲಿ ಸ್ವಚ್ಛತೆ ಕಾಪಾಡಿ’ ಎಂಬ ಶೀರ್ಷಿಕೆಯಡಿ ನನ್ನದೊಂದು ಪತ್ರ ಪ್ರಕಟಗೊಂಡಿತ್ತು.
ಅಂತರಸಂತೆಯ ಅಂಗಡಿಬೀದಿ ಪ್ರಮುಖ ಜನನಿಬಿಡ ಪ್ರದೇಶವಾಗಿದ್ದು, ಇಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ದುರ್ವಾಸನೆ ಬೀರುವ ಜತೆಗೆ ಸೊಳ್ಳೆಗಳ ಹಾವಳಿಯೂ ಹೆಚ್ಚಾಗಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿತ್ತು. ಇದು ಮೈಸೂರು-ಮಾನಂದವಾಡಿ ಮುಖ್ಯರಸ್ತೆಯಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಾಗೂ ಕೇರಳಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿತ್ತು.
ಈ ಸಂಬಂಧ ನಾನು ಬರೆದ ಓದುಗರ ಪತ್ರವೊಂದು ʼಆಂದೋಲನʼ ಪತ್ರಿಕೆಯಲ್ಲಿ ಪ್ರಕಟಗೊಂಡ ಬಳಿಕ ಅಂತರಸಂತೆ ಗ್ರಾಮ ಪಂಚಾಯಿತಿಯವರು ಎಚ್ಚೆತ್ತುಕೊಂಡು ಅಂಗಡಿಬೀದಿಯನ್ನು ಸ್ವಚ್ಛಗೊಳಿಸಿದ್ದಾರೆ. ಸಾರ್ವಜನಿಕ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ‘ಆಂದೋಲನ’ ದಿನಪತ್ರಿಕೆಗೆ ಧನ್ಯವಾದಗಳು.
-ಎಸ್.ಮಹೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.





