Mysore
26
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಾಲ್ಮೀಕಿ ಹಗರಣವನ್ನು ಮೂರು ಸಂಸ್ಥೆಗಳಿಂದ ತನಿಖೆ ಮಾಡಲಾಗುತ್ತಿದೆ: ಸಿಎಂ

ಮೈಸೂರು: ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಎಸ್ಐಟಿ ಮತ್ತು ಇಡಿ ಸೇರಿ ಮೂರು ಇಲಾಖೆಗಳಿಂದ ತನಿಖೆಗಳಾಗುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿಂದು ಮಾಧ್ಯಮಗಳು ಎಸ್ಐಟಿ ಖಜಾನೆ ಇಲಾಖೆಯಿಂದಲೇ 180 ಕೋಟಿ ವರ್ಗಾವಣೆ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಖಜಾನೆಯಿಂದ ವರ್ಗಾವಣೆಯಾಗಲು ಸಾಧ್ಯವಿಲ್ಲ. ಖಜಾನೆಯಿಂದ ಇಲಾಖೆಗೆ ಹಣ ಹೋಗಿರುತ್ತದೆ. ಅಲ್ಲಿ ಅವ್ಯವಹಾರವಾಗಿರುವ ಬಗ್ಗೆ ಎಸ್.ಐ. ಟಿ ತನಿಖೆ ಮಾಡುತ್ತಿದೆ ಎಂದರು. ತನಿಖೆ ವರದಿ ಇನ್ನೂ ಬಂದಿಲ್ಲ ಎಂದರು.

ಆರ್ಥಿಕ ಇಲಾಖೆ ಸಚಿವರಾಗಿರುವ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಜಿ. ಟಿ .ದೇವೇಗೌಡರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬ್ಯಾಂಕುಗಳಲ್ಲಿ ಆಗುವ ಅವ್ಯವಹಾರಗಳಿಗೆಲ್ಲಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿಗಳು ರಾಜಿನಾಮೆ ನೀಡಬೇಕಲ್ಲ ಎಂದರು. ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿಯಾಗಲಿ ಅಂತಿಮ ವರದಿಯಾಗಲಿ ಬಂದಿಲ್ಲ. ಆರೋಪಪಟ್ಟಿ ಹಾಕಿದ ಮೇಲೆ ವರದಿ ಬರುತ್ತದೆ ಎಂದರು.

ಖಜಾನೆಯಿಂದ ಹಣ ವರ್ಗಾವಣೆಯಾಗಿರುವುದು ಇಲಾಖೆಯ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ ಪ್ರತಿ ಸಾರಿಯೂ ನನ್ನ ಬಳಿ ಬರುವುದಿಲ್ಲ. ಎಷ್ಟು ಹಣವಿದೆಯೋ ಅಷ್ಟನ್ನು ಅಧಿಕಾರಿಗಳು ಬಿಡುಗಡೆ ಮಾಡುತ್ತಾರೆ. ಅದಕ್ಕೆ ನನ್ನ ಸಹಿ ಅಗತ್ಯವಿಲ್ಲ. ಪ್ರಕರಣದ ತನಿಖೆ ಇನ್ನೂ ಮುಗಿದೇ ಇಲ್ಲ. ತನಿಖೆ ಮಾಡಿ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

Tags: