Mysore
28
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮುಡಾ ಹಗರಣ ಸಿಬಿಐ ತನಿಖೆಗೆ ವಹಿಸಲು ಸಿಎಂ ಸಿದ್ದರಾಮಯ್ಯ ನಿರಾಕರಣೆ

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಮ್ಮ ಪೊಲೀಸರು ತನಿಖೆ ವಿಚಾರದಲ್ಲಿ ಸಮರ್ಥರಿದ್ದಾರೆ. ತನಿಖೆಯಲ್ಲಿ ತಪ್ಪಾಗಿದೆ ಎಂಬುವುದು ಗೊತ್ತಾದ್ರೆ ಎಲ್ಲರ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿದ್ದಾರೆ.

ನಗರದಲ್ಲಿ ಮುಡಾ ಹೆಸರು ಹೇಳುತ್ತಿದಂತೆ ಗರಂ ಆದ ಸಿಎಂ ಸಿದ್ದರಾಮಯ್ಯ, ಎಷ್ಟು ಸಲ ಇದರ ಬಗ್ಗೆ ಹೇಳುವುದು. ಮುಡಾದಲ್ಲಿ 50:50 ರದ್ದಾಗಿದೆ. ನನ್ನ ಹೆಂಡತಿಯ ವಿಚಾರವನ್ನು ವಿವಾದ ಮಾಡುತ್ತಿದ್ದಾರೆ.ನಾನು ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ. ನಮ್ಮ ಜಮೀನಿನನ್ನು ನಿಯಮಬಾಹಿರವಾಗಿ ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಅದಕ್ಕೆ ಅವರೇ ತಪ್ಪಾಯಿತು ಎಂದು ಹೇಳಿ ಸೈಟ್ ಕೊಟ್ಟಿದ್ದಾರೆ. ಇದರಲ್ಲಿ ಯಾವ ವಿವಾದ ಇದೆ ಹೇಳಿ, ಸುಮ್ಮನೇ ಪ್ರತಿಭಟನೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.

ಅಲ್ಲದೆ ಮುಡಾ ಅಕ್ರಮದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ತಪ್ಪಾಗಿದೆ ಎಂಬುದು ಗೊತ್ತಾದರೇ ಎಲ್ಲರೂ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣ ಸಿಬಿಐಗೆ ವಹಿಸುವ ವಿಚಾರ‌ ನಮ್ಮ ಪೊಲೀಸರನೇ ಸಮರ್ಥರಿಲ್ವಾ..? ಎಲ್ಲದಕ್ಕೂ ಸಿಬಿಐ ಸಿಬಿಐ ಅನ್ನುವ ಬಿಜೆಪಿ ತಮ್ಮ ಅವಧಿಯಲ್ಲಿ ಎಷ್ಟು ಕೇಸ್ ನ್ನ ಸಿಬಿಐಗೆ ಕೊಟ್ಟಿದ್ದಾರೆ ಹೇಳಿ ಎಂದು ಪ್ರಶ್ನೆ ಮಾಡಿದರು.  ಜೊತೆಗೆ ಈಗಿನ ಸಿಬಿಐ ಮುಖ್ಯಸ್ಥ ಕೂಡ ಕರ್ನಾಟಕದಲ್ಲಿ ಕೆಲಸ ಮಾಡಿದವರು.ನಮ್ಮ ಪೊಲೀಸರು ತನಿಖೆ ವಿಚಾರದಲ್ಲಿ ಸಮರ್ಥರಿದ್ದಾರೆ ಎಂದು ಹೇಳಿದರು.

Tags:
error: Content is protected !!