Mysore
22
clear sky

Social Media

ಶುಕ್ರವಾರ, 02 ಜನವರಿ 2026
Light
Dark

103 ಅಡಿ ದಾಟಿದ ಕೆಆರ್‌ಎಸ್;‌ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ

ಕೇರಳ ಹಾಗೂ ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಮೈಸೂರು, ಕೊಡಗು ಭಾಗದ ಅಣೆಕಟ್ಟುಗಳು ಭರ್ತಿಯತ್ತ ಸಾಗುತ್ತಿವೆ. ಕಬಿನಿ ಜಲಾಶಯ ಹಾಗೂ ಹಾರಂಗಿ ಬಹುತೇಕ ಭರ್ತಿಯಾಗಿದ್ದು, ಕೆಆರ್‌ಎಸ್‌ ಹಾಗೂ ಹೇಮಾವತಿ ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಮೈಸೂರು ಹಾಗೂ ಕೊಡಗು ಭಾಗಗಳಲ್ಲಿರುವ ವಿವಿಧ ಪ್ರಮುಖ ಜಲಾಶಯಗಳಲ್ಲಿ ಇಂದು ( ಜುಲೈ 10 ) ಎಷ್ಟು ಪ್ರಮಾಣದ ನೀರಿದೆ, ಒಳಹರಿವು ಹಾಗೂ ಹೊರಹರಿವು ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕೆಆರ್‌ಎಸ್ -‌ ಗರಿಷ್ಠ ಮಟ್ಟ: 124.80 ಅಡಿ, ನೀರಿನ ಮಟ್ಟ: 103.60 ಅಡಿ,
ಒಳಹರಿವು: 5663 ಕ್ಯೂಸೆಕ್, ಹೊರಹರಿವು: 582 ಕ್ಯೂಸೆಕ್‌

ಕಬಿನಿ: ಗರಿಷ್ಠ ಮಟ್ಟ: 2284 ಅಡಿ, ನೀರಿನ ಮಟ್ಟ: 2282.45 ಅಡಿ,
ಒಳಹರಿವು: 6148 ಕ್ಯೂಸೆಕ್, ಹೊರಹರಿವು: 2000 ಕ್ಯೂಸೆಕ್‌

ಹಾರಂಗಿ:‌ ಗರಿಷ್ಠ ಮಟ್ಟ: 129 ಅಡಿ, ನೀರಿನ ಮಟ್ಟ: 118.76 ಅಡಿ
ಒಳಹರಿವು: 3529 ಕ್ಯೂಸೆಕ್‌, ಹೊರಹರಿವು: 200 ಕ್ಯೂಸೆಕ್‌

ಹೇಮಾವತಿ: ಗರಿಷ್ಠ ಮಟ್ಟ: 117 ಅಡಿ, ನೀರಿನ ಮಟ್ಟ: 92.55 ಅಡಿ,
ಒಳಹರಿವು: 6166 ಕ್ಯೂಸೆಕ್, ಹೊರಹರಿವು: 250 ಕ್ಯೂಸೆಕ್‌

Tags:
error: Content is protected !!