Mysore
24
broken clouds

Social Media

ಗುರುವಾರ, 15 ಜನವರಿ 2026
Light
Dark

ರೋಟರಿ ಸೆಂಟ್ರಲ್ ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆರ್ ತಂತ್ರಿ ಆಯ್ಕೆ

ಮೈಸೂರು: ರೋಟರಿ ಸೆಂಟ್ರಲ್ ಮೈಸೂರಿನ 2024- 25 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆರ್ ತಂತ್ರಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ನಗರದ ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಪೈ ವಿಸ್ತ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಜತೆಗೆ ಗೌರವಾಧ್ಯಕ್ಷರಾಗಿ ಸಮರ್ಥ್ ವೈದ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದರು

ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಯುಕ್ತಶ ನಂದಾಜಿ ಮಹಾರಾಜ ಮಾತನಾಡಿ, ವಿಶ್ವದಲ್ಲೇ ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರೋಟರಿ ಕ್ಲಬ್, ಸಾಮಾಜಿಕ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಹೇಳಿದರು

ಬಳಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಡಿದ ಸುಬ್ರಹ್ಮಣ್ಯ ಆರ್ ತಂತ್ರಿ , ವಿಶ್ವದಲ್ಲೇ ಇರುವ ಲಕ್ಷಾಂತರ ರೋಟರಿ ಸದಸ್ಯರು ರೋಟರಿಗೆ ನೀಡುವ ಪ್ರತಿ ಪೈಸೆಯೂ ಸದ್ಬಳಿಕೆಯಾಗುತ್ತಿದ್ದು, ಸಮಾಜದ ವಿವಿಧ ಕಾರ್ಯಕ್ಕೆ ಉಪಯೋಗವಾಗುತ್ತಿದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದಾಗ ನಮಗೆ ಆತ್ಮತೃಪ್ತಿ ದೊರಕುತ್ತದೆ ಎಂದು ಹೇಳಿದರು.

ರೋಟರಿ ಪ್ರಧಾನ ಅಧಿಕಾರಿ ಸತೀಶ್ ಬೋಲಾರ್, ನಿಕಟ ಪೂರ್ವಾಧ್ಯಕ್ಷರಾದ ಎನ್ ಉಮೇಶ್, ರೋ ಸಹಾಯಕ ಗವರ್ನರ್ ಚೇತನ್ ವಿಶ್ವನಾಥ್, ನಿಕಟಪೂರ್ವ ಕಾರ್ಯದರ್ಶಿ ಪ್ರೇಮ್ ಸಾಗರ್, ಉಪಾಧ್ಯಕ್ಷ ವಿಜಯೇಂದ್ರ, ಎ.ಆರ್ ರವೀಂದ್ರ ಭಟ್, ಆಂಟೋನಿ ಮೋಸೆಸ್, ಅನಿಲ್ ಪದಕಿ, ಗುರುಪ್ರಸಾದ್, ಸಚ್ಚಿದಾನಂದ ಮೂರ್ತಿ, ಎಂಎಸ್ ಜಯಪ್ರಕಾಶ್, ಎಸ್ಆರ್ ಸ್ವಾಮಿ, ದಿನೇಶ್, ಅರುಣ್, ಜ್ಯೋತಿ ಅಶೋಕ್, ರಜನಿ, ವಿವೇಕ್ ಹಾಜರಿದ್ದರು.

Tags:
error: Content is protected !!