Mysore
14
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್

ಬೆಂಗಳೂರು : ನಗರದ ಎಂಜಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಬಸ್‌ ಹೊತ್ತಿ ಉರಿದೆ. ಬಸ್‌ ನಲ್ಲಿ ಸುಮಾರು ೩೦ ಜನ ಪ್ರಯಾಣಿಕರಿದ್ದರು. ಅದೃಷ್ಟವಶಾತ್‌ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಬಿಎಂಟಿಸಿ ಬಸ್‌ ರೋಸ್‌ ಗಾರ್ಡನ್‌ ನಿಂದ ಶಿವಾಜಿನಗರಕ್ಕೆ ಬರುತ್ತಿತ್ತು. ಮಾರ್ಗ ಮಧ್ಯೆ ಎಂಜಿ ರಸ್ತೆಯ ಅನಿಲ್‌ ಕುಂಬ್ಳೆ ಸಿಗ್ನಲ್‌ ನಲ್ಲಿ ಚಾಲಕ ಬಸ್‌ ಸ್ಟಾಪ್ ಮಾಡಿದ್ದರು. ಮತ್ತೆ ಸ್ಟಾರ್ಟ್‌ ಆಗಿಲ್ಲ.  ಎರಡರಿಂದ ಮೂರು ಸಲ ಸ್ಟಾರ್ಟ್‌ ಮಾಡಲು ಯತ್ನಿಸಿದ್ದಾರೆ. ಆದರೆ ಸ್ಟಾರ್ಟ್‌ ಆಗಲಿಲ್ಲ. ಈ ವೇಳೆ ಇಂಜಿನ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರನ್ನ ಕೆಳಗಿಳಿಸಿದ್ದಾರೆ. ಆದರೆ ಬೆಂಕಿಯ ಕೆನ್ನಾಲಿಗೆಗೆ ಇಡೀ ಬಸ್‌ ಸುಟ್ಟು ಭಸ್ಮವಾಗಿದೆ . ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Tags:
error: Content is protected !!