Mysore
20
overcast clouds

Social Media

ಸೋಮವಾರ, 30 ಡಿಸೆಂಬರ್ 2024
Light
Dark

ಮಹದಾಯಿ ವಿಚಾರ ; ಗೋವಾ ಸಿಎಂ ಪ್ರಮೋದ್ ಸಾವಂತ್ ಗೆ ತೀವ್ರ ಮುಖಭಂಗ

ಬೆಳಗಾವಿ : ಮಹದಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರದ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದ್ದ ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಗೆ ತೀವ್ರ ಮುಖಭಂಗ ಆಗಿದೆ.

ಗೋವಾ ಸಿಎಂ ಪ್ರಮೋದ್‌ ಸಾವಂತ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಮಹದಾಯಿ ಜಲಾನಯನ ಪ್ರದೇಶದಲ್ಲಿ ಯಾವುದೇ ಅನುಮತಿಯನ್ನು ಪಡೆಯದೆ ಕರ್ನಾಟಕ ಮಹದಾಯಿ ಕಾಮಗಾರಿಯನ್ನು ಆರಂಭಿಸಿದೆ ಎಂದು ಆರೋಪ ಮಾಡಿದ್ದರು.

ಬಳಿಕ ಗೋವಾ ಸಿಎಂ ಆರೋಪದ ಬೆನ್ನಲ್ಲೆ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ಸಂದರ್ಭವೂ ಕೂಡ ಕರ್ನಾಟಕದ ಕೃತ್ಯ ತಂಡದ ಮುಂದೆ ಬಯಲಾಗುತ್ತದೆ ಎಂದು ಪ್ರಮೋದ್‌ ಸಾವಂತ್‌ ಹೇಳಿದ್ದರು. ಅಸಲಿಗೆ ಅಲ್ಲಿ ಆದದ್ದು ಬೇರೆ. ಯಾಕೆಂದರೆ ಕಣಕುಂಬಿ ಬಳಿಯ ಜಲಾನಯನ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದ ಕೇಂದ್ರದ ತಂಡಕ್ಕೆ ಅಲ್ಲಿ ಯಾವುದೇ ಕಾಮಗಾರಿ ನಡೆಯದೆ ಇರುವುದು ದೃಢವಾಗಿದೆ. ಈ ಮೂಲಕ ಗೋವಾ ಸಿಎಂಗೆ ಮುಖಭಂಗವಾಗಿದೆ.

ಗೋವಾ ಸರ್ಕಾರ ಮಹದಾಯಿ ವಿಚಾರದಲ್ಲಿ ಕ್ಯಾತೆ ತೆಗೆಯುವುದು ಇದೇ ಮೊದಲೇನು ಅಲ್ಲ ಬಿಡಿ. ಪದೇ ಪದೇ ಒಂದಲ್ಲ ಒಂದು ರೀತಿ ಕ್ಯಾತೆ ತೆಗೆಯುತ್ತಲೆ ಬರುತ್ತಿದೆ. ಮೊದಲಿನಿಂದಲೂ ಕೂಡ ಮಹಾದಾಯಿ ಯೋಜನೆ ಜಾರಿಗೆ ಗೋವ ಸರ್ಕಾರ ಅಡ್ಡಗಾಲು ಹಾಕುತ್ತಾ ಬಂದಿದೆ. ಮಹದಾಯಿ ನ್ಯಾಯಧೀಕರಣ, ಸುಪ್ರಿಂ ಕೋರ್ಟ್‌ ತೀರ್ಪು ನೀಡಿದ್ದರೂ ಕೂಡ ಯಾವುದು ಜಾರಿಯಾಗುತ್ತಿಲ್ಲ. ಇದಷ್ಟೆ ಅಲ್ಲದೆ ಕೇಂದ್ರ ಅರಣ್ಯ ವನ್ಯಜೀವಿ ಹಾಗೂ ಪರಿಸರ ಇಲಾಖೆಯ ಅನುಮತಿಗೂ ಅಡ್ಡಗಾಲು ಹಾಕುತ್ತಿದ್ದು, ೫ ದಶಕಗಳ ಕಾಲ ಹೋರಾಟ ಮಾಡಿದರೂ ಸಹ ಮಲಪ್ರಭಾ ನದಿ ಪಾತ್ರದ ಜನರಿಗೆ ಒಂದೇ ಒಂದು ಹನಿ ನೀರು ಸಿಗದೆ ಇರುವುದು ನಿಜಕ್ಕೂ ಬೇಸರ ಸಂಗತಿಯಾಗಿದೆ.

 

Tags: