Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅಮೆರಿಕಾ, ಥಾಯ್ಲೆಂಡ್ ನಂತೆ ಭಾರತಕ್ಕೆ ಬರುತ್ತಾ ಡೆಂಗ್ಯೂ ವ್ಯಾಕ್ಸೀನ್ ?‌

ಬೆಂಗಳೂರು : ರಾಜ್ಯದಲ್ಲಿ ಪ್ರತಿದಿನ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಹೆಚ್ಚಾಗಿ ಮಕ್ಕಳು ಸಹ ಈ ಡೆಂಗ್ಯೂ ಜ್ವರಕ್ಕೆ  ತುತ್ತಾಗಿ ನರಳುತ್ತಿದ್ದಾರೆ. ಕೆಲವು ಜಿಲ್ಲೆಯಲ್ಲಿ ಈ ಡೆಂಗ್ಯೂಗೆ ಮಕ್ಕಳು ಬಲಿಯಾಗಿದ್ದು, ಪೋಷಕರಲ್ಲಿ ಸಾಕಷ್ಟು ಆತಂಕ ಉಂಟು ಮಾಡುತ್ತಿದೆ.

ಇನ್ನು ಮಕ್ಕಳಲ್ಲಿ ಡೆಂಗ್ಯೂ ಕೇಸ್‌ ಜಾಸ್ತಿಯಾಗುತ್ತಿರುವ ಕಾರಣ ಅಮೆರಿಕಾ, ಥಾಯ್ಲೆಂಡ್ ನಂತೆ ಭಾರತದಲ್ಲಿ ಡೆಂಗ್ಯೂ ವ್ಯಾಕ್ಸೀನ್ ಗಾಗಿ ಹೆಚ್ಚಿನ ಬೇಡಿಕೆ ಶುರುವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಹೌದು, ಭಾರತದಲ್ಲಿ ಇಷ್ಟು ದಿನ ಡೆಂಗ್ಯೂ ಗೆ ಯಾವುದೇ ರೀತಿಯ ವ್ಯಾಕ್ಸೀನ್ ಇರಲಿಲ್ಲ. ಆದರೆ ಅಮೆರಿಕಾ ಈ ಡೆಂಗ್ಯೂ ಜ್ವರಕ್ಕಾಗಿ ಎರಡು ವ್ಯಾಕ್ಸೀನ್‌ ಗಳನ್ನ ಕಂಡು ಹಿಡಿದಿದೆ. Dengvaxia,q denga, ಎಂಬ ವ್ಯಾಕ್ಸೀನ್ ಕಂಡು ಹಿಡಿದಿದ್ದು, ಪರೀಕ್ಷೆಯಲ್ಲಿಯೂ ಕೂಡ ಪಾಸ್ ಆಗಿದೆ. ಅಲ್ಲದೆ ಥಾಯ್ಲೆಂಡ್‌ನಲ್ಲಿ ಬೆಸ್ಟ್ ರಿಸಲ್ಟ್ ಸಹ ಸಿಕ್ಕಿದೆ. ಥಾಯ್ಲೆಂಡ್​ನಲ್ಲಿ ಡೆಂಗ್ಯೂ ಸ್ಫೋಟಗೊಂಡ ಸಂದರ್ಭದಲ್ಲಿ ಇದೇ ವ್ಯಾಕ್ಸೀನ್ ಗಳನ್ನ ಬಳಕೆ ಮಾಡಿ ಪ್ರಕರಣಗಳನ್ನ ಹತೋಟಿಗೆ ತರಲಾಗಿದೆ. ಈಗಾಗಿಯೇ ನಮ್ಮಲ್ಲಿ ಈ ವ್ಯಾಕ್ಸೀನ್‌ ಗೆ ವೈದ್ಯರಿಂದಲೇ ಬೇಡಿಕೆ ಶುರುವಾಗುತ್ತಿದೆ.

ಈ ಡೆಂಗ್ಯೂ ಲಸಿಕೆಯನ್ನು ಆರು ವರ್ಷ ಮೇಲ್ಪಟ್ಟವರು ಪಡೆದುಕೊಳ್ಳಬಹುದು. ಅದರಲ್ಲೂ ಈ ವ್ಯಾಕ್ಸೀನ್ ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಮೇಲೆ ಡೆಂಗ್ಯೂ ಜ್ವರ ಹೆಚ್ಚಾಗಿ ಕಾಡುತ್ತಿರುವುದರಿಂದ ಇದೇ ಕಾರಣಕ್ಕೆ ಈ ವ್ಯಾಕ್ಸೀನ್ ಗೆ ವೈದ್ಯರಿಂದಲೇ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಭಾರತದಲ್ಲಿ ಸೀರಮ್ ಇನ್ಸಿಟಿಟ್ಯೂಟ್ ಒಂದು ಸುತ್ತಿನ ಟ್ರಯಲ್ ಮಾಡಿದೆಯಂತೆ. ಒಂದು ವೇಳೆ ಲೈಸೆನ್ಸ್ ಕ್ಲಿಯರ್ ಆದ್ರೆ ಈ ಡೆಂಗ್ಯೂ ಲಸಿಕೆ ಭಾರತಕ್ಕೆ ಬರುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ವ್ಯಾಕ್ಸೀನ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Tags: