Mysore
24
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮೈಸೂರು: ಖಾಸಗಿ ಲಾಡ್ಜ್‌ನಲ್ಲಿ ವೇಶ್ಯವಾಟಿಕೆ: ಇಬ್ಬರು ಯುವತಿಯರ ರಕ್ಷಣೆ

ಮೈಸೂರು: ಮೈಸೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ನಡೆಯುತ್ತಿದ್ದ ವೇಶ್ಯವಾಟಿಕೆ ಅಡ್ಡದ ಮೇಲೆ ಸಿಸಿಬಿ ಹಾಗೂ ವಿಜಯನಗರ ಪೊಲೀಸರು ದಾಳಿ ಮಾಡಿದ್ದಾರೆ.

ವಿಜಯನಗರದ ಟ್ಯಾಂಕ್‌ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಮೇಲೆ ದಾಳಿ ಮಾಡಿದ್ದು, ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ ಮತ್ತು ಯುವಕರನ್ನು ವಶಕಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯ ರಾಜು ಎಂಬುವವರು ಈ ಹೋಟೆಲ್‌ ನಡೆಸುತ್ತಿದ್ದರು ಎಂದು ಹೇಳಲಾಗಿದ್ದು, ವೇಶ್ಯವಾಟಿಕೆ ನಡೆಯುತ್ತಿರುವ ಸಂಬಂಧ ಖಚಿತ ಮಾಹಿತಿ ಮೇರೆಗೆ ಹೋಟೆಲ್‌ ಮೇಲೆ ದಾಳಿ ಮಾಡಿದ ಸಿಸಿಬಿ ಹಾಗೂ ವಿಜಯನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಕ್ಷಿಸಲಾದ ಯುವತಿಯರ ಪೈಕಿ ಒಬ್ಬಾಕೆ ಜಾರ್ಖಂಡ್‌ ಮೂಲದವರಾದರೇ, ಮತ್ತೊಬ್ಬರು ಹುಣಸೂರಿನವರು ಎಂದು ಹೇಳಲಾಗಿದೆ.

ವೇಶ್ಯವಾಟಿಕೆ ಸಂಬಂಧ ಆರು ತಿಂಗಳ ಹಿಂದೆ ಇದೇ ಹೋಟೆಲ್‌ ಮೇಲೆ ದಾಳಿ ಮಾಡಿದ್ದ ಪೊಲೀಸರು ಖಡಕ್‌ ವಾರ್ನಿಂಗ್‌ ನೀಡಿದ್ದರು. ಹಾಗಿದ್ದರೂ ಅವರು ಈ ದಂಧೆಯನ್ನು ಮುಂದುವರೆಸಿದ್ದು,

Tags:
error: Content is protected !!