Mysore
21
overcast clouds

Social Media

ಶನಿವಾರ, 03 ಜನವರಿ 2026
Light
Dark

ರಾಜ್ಯ ಪತ್ರಿಕೆಗೆ ಸರಿಸಮನಾದ ʼಆಂದೋಲನʼ

ಎಚ್. ಡಿ. ಕೋಟೆ: ಪತ್ರಿಕಾ ರಂಗದಲ್ಲಿ ಮಾನವೀಯ ಗುಣಗಳೊಂದಿಗೆ ನೊಂದವರಿಗೆ ಬೆನ್ನೆಲುಬಾಗಿ, ಸಮಾಜದ ಏಳಿಗೆಗೆ ನಿರಂತರವಾಗಿ, ರಾಜ್ಯ ಮಟ್ಟದ ಪತ್ರಿಕೆಗೆ ಸರಿ ಸಮಾನವಾಗಿ ‘ಆಂದೋಲನ’ ದಿನಪತ್ರಿಕೆ ಕೆಲಸ ನಿರ್ವಹಿಸುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಪಟ್ಟಣದ ಆಡಳಿತ ಭವನದಲ್ಲಿ ‘ಆಂದೋಲನ’ ದಿನಪತ್ರಿಕೆಯ ೫೨ನೇ ವರ್ಷದ ವಾರ್ಷಿಕೋತ್ಸವದ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಆಂದೋಲನ’ವೆಂದರೆ ಅದೊಂದು ಕ್ರಾಂತಿ. ‘ಆಂದೋಲನ’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರಿಂದ ಈಗಿನ ಸಂಪಾದಕರಾದ ರವಿ ಕೋಟಿ, ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿಯವರು ಪತ್ರಿಕೆ ಮುಖಾಂತರ ಸಮಾಜದ ಭ್ರಷ್ಟಾಚಾರ, ಜಾತೀಯತೆ, ಅಸ್ಪೃಶ್ಯತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ರೈತರ, ಯೋಧರ, ಬಡವರ, ದಲಿತರ, ಗಿರಿಜನರ, ಶೋಷಿತ ವರ್ಗದವರ ಪರವಾಗಿ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಪತ್ರಿಕೆಯ ತಾಲ್ಲೂಕು ವರದಿಗಾರ ಮಂಜು ಕೋಟೆ, ಅನಿಲ್ ಅಂತರಸಂತೆ, ದಾಸೇಗೌಡ, ಹಂಪಾಪುರ ನಾಗೇಶ, ಮುಖಂಡರಾದ ಸತೀಶ್ ಗೌಡ, ನಾಗನಹಳ್ಳಿ ಪ್ರದೀಪ, ರಾಜು ವಿಶ್ವಕರ್ಮ, ಗಣೇಶಚಾರ್ ಪರಶಿವಮೂರ್ತಿ, ಶಿವಮಲ್ಲಪ್ಪ, ತಹಸಿಲ್ದಾರ್ ಶ್ರೀನಿವಾಸ್, ರುಕಿಯ ಬೇಗಂ, ಸಣ್ಣರಾಮಪ್ಪ, ಮಹೇಶ್, ತಾಪಂ ಇಒ ಧರಣೇಶ್, ಸುಷ್ಮಾ, ಸಿಪಿಐ ಶಬ್ಬೀರ್ ಹುಸೇನ್, ಈರೇಗೌಡ, ಚಿಕ್ಕವೀರ ನಾಯಕ, ನರಸಿಂಹಮೂರ್ತಿ, ಐಡಿಯಾ ವೆಂಕಟೇಶ್, ಮಿಲ್ ನಾಗರಾಜು, ಶಂಭುಲಿಂಗ ನಾಯಕ, ಇತರರು ಹಾಜರಿದ್ದರು.

Tags:
error: Content is protected !!