Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

Mysuru Jobs: ಗುತ್ತಿಗೆ ಆಧಾರದ ನೇಮಕಾತಿ

ಮೈಸೂರು:  2024-25ನೇ ಸಾಲಿಗೆ ಆತ್ಮ ಯೋಜನೆಯಡಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಒಂದು ವರ್ಷದ ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ/ಕೃಷಿ ಸಂಬoಧಿತ ವಿಷಯಗಳಲ್ಲಿ ಸ್ನಾತಕೊತ್ತರ ಪದವಿ, ಕಂಪ್ಯೂಟರ್ ಜ್ಞಾನ ಹಾಗೂ ಕೃಷಿ ಸಂಬoಧಿತ ಚಟುವಟಿಕೆಗಳಲ್ಲಿ 2 ವರ್ಷಗಳ ಕ್ಷೇತ್ರಮಟ್ಟದ ಅನುಭವ ಕಡ್ಡಾಯ ವಾಗಿರುತ್ತದೆ. ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ/ಕೃಷಿ ಸಂಬoಧಿತ ವಿಷಯಗಳಲ್ಲಿ ಪದವಿ/ಸ್ನಾತಕೊತ್ತರ ಪದವಿ ಹಾಗೂ ಕೃಷಿ ಸಂಬoಧಿತ ಚಟುವಟಿಕೆಗಳಲ್ಲಿ 1 ವರ್ಷದ ಕ್ಷೇತ್ರಮಟ್ಟದ ಅನುಭವವನ್ನು ಹೊಂದಿರಬೇಕು.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ನಿಗಧಿತ ನಮೂನೆಯಲ್ಲಿ ಪೂರ್ಣ ಮಾಹಿತಿಯೊಂದಿಗೆ ಸೀಲು ಮಾಡಿದ ಲಕೋಟೆಯಲ್ಲಿ ಮುದ್ದಾಂ/ನೊoದಣಿ ಅಂಚೆ ಮೂಲಕ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸಾರ್ವಜನಿಕ ಕಛೇರಿಗಳ ಕಟ್ಟಡದ ಆತ್ಮ ವಿಭಾಗದ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಜುಲೈ 31 ರೊಳಗೆ ಸಲ್ಲಿಸಬೇಕು. ಅರ್ಜಿಗಳೊಂದಿಗೆ ಕಡ್ಡಾಯವಾಗಿ ವಿದ್ಯಾರ್ಹತೆಗೆ ಸಂಬoಧಿಸಿದ ಎಲ್ಲಾ ವರ್ಷದ ಅಂಕಪಟ್ಟಿಗಳು, ಪ್ರಮಾಣಪತ್ರಗಳು, ಕಂಪ್ಯೂಟರ್ ಜ್ಞಾನಕ್ಕೆ ಸಂಬoಧಿಸಿದ ಪ್ರಮಾಣ ಪತ್ರಗಳು, ಅನುಭವಕ್ಕೆ ಸಂಬoಧಿಸಿದ ಪ್ರಮಾಣಪತ್ರಗಳು ಹಾಗೂ ಎಲ್ಲಾ ಪ್ರಮಾಣ ಪತ್ರಗಳ ದೃಢೀಕೃತ ಪ್ರತಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಉಪ ಯೋಜನಾ ನಿರ್ದೇಶಕರ ಮೊ.ಸಂ: 8088808621 ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ದೂ.ಸಂ: 0821-2442239 ನ್ನು ಸಂಪರ್ಕಿಸಬಹುದು ಎಂದು ಯೋಜನಾ ನಿರ್ದೇಶಕರು(ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: