Mysore
24
scattered clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ಚಹಾ ಪ್ರಿಯರಿಗೆ ಬಿಗ್‌ ಶಾಕ್:‌ ಬ್ಯಾನ್‌ ಆಗಲಿದೆ ಕೃತಕ ಬಣ್ಣ, ರಾಸಾಯನಿಕವಿರುವ ಟೀ ಪುಡಿ

ಬೆಂಗಳೂರು: ಬಣ್ಣದ ಕಾಟನ್‌ ಕ್ಯಾಂಡಿ, ಕಬಾಬ್‌ ಮತ್ತು ಪಾನಿಪುರಿ ಅಪಾಯಕಾರಿ ತಿನಿಸು, ಆಹಾರ ಪದಾರ್ಥಗಳನ್ನು ಬ್ಯಾನ್‌ ಮಾಡಲಾಗಿತ್ತು. ಈ ಬೆನ್ನಲ್ಲೇ ಈಗ ಇವುಗಳ ಸಾಲಿಗೆ ಟೀ ಪುಡಿ ಕೂಡ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಟೀ ಪುಡಿಯಲ್ಲಿ ಕೃತಕ ಬಣ್ಣ, ರುಚಿ ಹೆಚ್ಚಿಸುವ ರಾಸಾಯನಿಕ ಬಳಕೆಯಾಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೃತಕ ಬಣ್ಣ, ರಾಸಾಯನಿಕ ಇರುವ ಟೀ ಪುಡಿಯನ್ನು ಬ್ಯಾನ್‌ ಮಾಡಲು ಸರ್ಕಾರ ನಿರ್ಧರಿಸಿದೆ.

ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ತೀರ್ಮಾನ ಮಾಡಲಾಗಿದ್ದು, ಶೀಘ್ರವೇ ಬ್ಯಾನ್‌ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ. ಇತೀಚೆಗೆ ಗೋಬಿ ಮಂಚೂರಿ, ಕಾಟನ್‌ ಕ್ಯಾಂಡಿ ಸೇರಿದಂತೆ ನಾನ್‌ವೆಜ್‌ ಪ್ರಿಯರ ಕಬಾಬ್‌ ಮತ್ತು ಹೆಣ್ಣುಮಕ್ಕಳ ಹಾಟ್‌ ಫೆವರೇಟ್‌ ಪಾನಿಪುರಿ ಬ್ಯಾನ್‌ ವಿಚಾರ ಭಾರೀ ಸದ್ದು ಮಾಡಿತ್ತು. ಇದೀಗ ಟೀಗೆ ಕುತ್ತು ಬಂದಿದ್ದು, ಚಹಾ ಪ್ರಿಯರಿಗೆ ಬಿಗ್‌ ಶಾಕ್‌ ಆಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಟೀ ಪುಡಿ ಮಾದರಿ ಸಂಗ್ರಹಿಸಲಾಗಿತ್ತು. ಬೆಂಗಳೂರಿನಲ್ಲಿ ಸಂಗ್ರಹಿಸಿದ್ದ ೪೯ ಟೀ ಪುಡಿ ಸ್ಯಾಂಪಲ್ಸ್‌ ಪೈಕಿ ೪೫ ಟೀ ಪುಡಿ ಸ್ಯಾಂಪಲ್ಸ್‌ ಅಸುರಕ್ಷಿತವಾಗಿರುವುದು ಕಂಡು ಬಂದಿದೆ. ಪರಿಶೀಲನೆ ವೇಳೆ ಟೀ ಪೌಡರ್‌ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಪ್ರಮುಖವಾಗಿ ಚಹಾದ ಪೌಡರ್‌ ಕಲರ್‌ ಹೆಚ್ಚಿಸಲು ಟೀ ಬಣ್ಣ ಬರಲು ಕೆಮಿಕಲ್‌ ಬಣ್ಣಗಳ ಬಳಕೆ ಮಾಡಲಾಗುತ್ತಿದೆ ಎಂಬ ಭಯಾನಕ ಅಂಶ ಪತ್ತೆ ಆಗಿದೆ.

ರಸ್ತೆ ಬದಿಯ ಕೆಲವು ಚಹಾದ ಅಂಗಡಿಗಳಲ್ಲಿ ತೂಕ ಹೆಚ್ಚಿಸಲು ಟೀ ಪುಡಿಯಲ್ಲಿ ಕೆಲವು ಮರದ ಪುಡಿ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರಲ್ಲಿಯೂ ಕೂಡ ಕ್ಯಾನ್ಸರ್‌ಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಟೀ ಪುಡಿಗೆ ಬಳಸುವ ಕ್ಯಾನ್ಸರ್‌ ಕಾರಕ ಅಂಶಗಳನ್ನು ಬ್ಯಾನ್‌ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧಾರ ಮಾಡಿದೆ.

Tags:
error: Content is protected !!