Mysore
20
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಬಿಜೆಪಿ ಅವಧಿಯಲ್ಲಿ ಮುಡಾ ಅತಿಕ್ರಮಣ ಆಗಿದೆ: ದಿನೇಶ್‌ ಗುಂಡೂರಾವ್‌

ಮಂಗಳೂರು: ಮೈಸೂರು ನಗರಾಭಿವೃದ್ಧ ಪ್ರಾಧಿಕಾರದಲ್ಲಿ ಬಿಜೆಪಿ ಅವಧಿಯಲ್ಲಿಯೇ ಅತಿಕ್ರಮನ ನಡೆದಿದೆ. ಅತಿಕ್ರಮಿಸಿದ ಜಾಗದಲ್ಲಿ ಮೂಡಾ ಲೇಔಟ್‌ ಮೂಡಿಸಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಮುಡಾ ಆಕ್ರಮಿಸಿಕೊಂಡಿರುವ ಜಾಗದ ಬಗ್ಗೆ ಮುಖ್ಯಮಂತ್ರಿ ಆದ ತಕ್ಷಣ ಬಿಟ್ಟುಕೊಡಬೇಕೆ. ಮೂರು ಎಕರೆ ಹದಿನಾರು ಗುಂಟೆ ಸಿಎಂ ಅವರ ಪತ್ನಿ ಜಾಗವಾಗಿದೆ. ಈ ಅತಿಕ್ರಮಣ ಬಗ್ಗೆ ಮುಡಾ ಕೂಡಾ ತಪ್ಪೊಪ್ಪಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದರು.

50:50 ನಿವೇಶನ ಹಂಚಿಕೆ ವಿಚಾರದಲ್ಲಿ ಸಿಎಂ ಬದಲಿ ಜಾಗವನ್ನು ಒಪ್ಪಿದ್ದಾರೆ. ಆ ಪ್ರಕಾರ ಹೋಗುವುದಾದರೇ ಸಿಎಂ ಅವರು ಕೋರ್ಟ್‌ ಮೆಟ್ಟಿಲೇರಿ ಜಾಗ ವಾಪಾಸ್‌ ಕೇಳಬೇಕಿತ್ತು. ಆದರೆ ಸಿಎಂ ಅವರು ಹಾಗೇ ಮಾಡಿಲ್ಲ ಎಂದು ಹೇಳಿದರು. ಜತೆಗೆ ಸಿಎಂ ಅವರು ಬದಲಿ ಜಾಗವನ್ನು ಒಪ್ಪಿಕೊಂಡ ಮೇಲೆ ಇದರಲ್ಲಿ ಭ್ರಷ್ಟಾಚಾರ ಎಲ್ಲಿಂದ ಬರುತ್ತದೆ. ಬಿಜೆಪಿ ಅವರ ಕಥೆಗಳನ್ನು ತೆಗೆದಾಗ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

Tags:
error: Content is protected !!