Mysore
22
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮುಂಬೈ: ವಿಶ್ವಕಪ್‌ ವಿಜಯೋತ್ಸವ ಪರೇಡ್‌ನಲ್ಲಿ 11 ಮಂದಿಗೆ ಗಾಯ

ಮುಂಬೈ: ವೆಸ್ಟ್‌ ಇಂಡೀಸ್‌ ಹಾಗೂ ಅಮೇರಿಕಾ ಸಹಭಾಗಿತ್ವದಲ್ಲಿ ನಡೆದ 9ನೇ ಆವೃತ್ತಿಯ ಟಿ20 ವಿಶ್ವಕಪ್‌ ಜಯಿಸಿದ ಟೀಂ ಇಂಡಿಯಾಗೆ ಭಾರತದಲ್ಲಿ ಭರ್ಜರಿ ಸ್ವಾಗತ ಸಿಕ್ಕಿತು.

ಟೀಂ ಇಂಡಿಯಾ ಆಟಗಾರರು ಗುರುವಾರ (ಜುಲೈ.4) ವೆಸ್ಟ್‌ ಇಂಡೀಸ್‌ ನಿಂದ ಭಾರತಕ್ಕೆ ಆಗಮಿಸಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಆಗಮಿಸಿದ ರೋಹಿತ್‌ ಅಂಡ್‌ ಟೀಂಗೆ ಅದ್ದೂರಿ ಸ್ವಾಗತ ದೊರೆಯಿತು.

ಇನ್ನು ವಿಶ್ವಕಪ್‌ ವಿಜಯೋತ್ಸವ ಆಚರಿಸಿದ ಟೀಂ ಇಂಡಿಯಾ ಮರೀನ್‌ ಡ್ರೈವ್‌ ಬೀಚ್‌ನಿಂದ 9 ಕಿಮೀ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಹೊರಡಲಾಯಿತು.

ಈ ವಿಜಯೋತ್ಸವ ಪೆರೇಡ್‌ ಮಾರ್ಗದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳು ಜಮಾಯಿಸಿದ್ದು, ಹನ್ನೊಂದಕ್ಕು ಅಧಿಕ ಮಂದಿಗೆ ಕಾಲ್ತುಳಿತದಿಂದ ಗಾಯಗೊಂಡಿದ್ದಾರೆ. ಗಾಐಗೊಂಡವರ ಪೈಕಿ ಒಂಭತ್ತು ಮಂದಿಯನ್ನು ಸರ್ಕಾರಿ ಜಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಪರೀತ ಜನಸಂದಣಿಯಿಂದ ಗಾಯಗಳ ಜೊತೆಯಲ್ಲಿ ಉಸಿರಾಟ ತೊಂದರೆಯನ್ನು ನೆರೆದಿದ್ದ ಅಭಿಮಾನಿಗಳು ಅನುಭವಿಸಿದ್ದಾರೆ. ಈ ಬಗ್ಗೆ ಜೆಜೆ ಗ್ರೂಪ್‌ ಆಫ್‌ ಆಸ್ಪಟಲ್‌ ಡೀನ್‌ ಮಾಹಿತಿ ನೀಡಿದ್ದಾರೆ.

 

Tags:
error: Content is protected !!