Mysore
23
broken clouds
Light
Dark

ಸ್ವಚ್ಛತೆ ಕಾಪಾಡದಿದ್ದಲ್ಲಿ ಬಿಬಿಎಂಪಿಯಿಂದ ೫೦ ರೂ ದಂಡ

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ. ಮತ್ತೊಂದೆಡೆ ಡೆಂಗ್ಯೂಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಲೇ ಜಿಲ್ಲೆಯಾದ್ಯಂತ ಡೆಂಗ್ಯೂ ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದರು ಕೂಡ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಲೆ ಇದೆ.

ಬಿಬಿಎಂಪಿ ಕೂಡ ಬೆಂಗಳೂರಿನಲ್ಲಿ ಏರಿಕೆಯಾಗುತ್ತಿರುವ ಡೆಂಗ್ಯೂ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಇದೀಗ ಡೆಂಗ್ಯೂ ನಿಯಂತ್ರಣಕ್ಕೆ ದಂಡಪ್ರಯೋಗವನ್ನು ಸಹ ಕೈಗೊಳ್ಳುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನ , ಜಾಗ ಅಥವಾ ಸ್ವತ್ತುಗಳಲ್ಲಿ ಸೊಳ್ಳೆ ಉತ್ಪತ್ತಿ ಕಂಡು ಬಂದಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಲಾಗುತ್ತಿದೆ. ಒಂದು ವೇಳೆ  ಅದಕ್ಕೆ ಸ್ಪಂದಿಸದಿದ್ದಲ್ಲಿ ಮತ್ತು ಸ್ವಚ್ಛತೆ ಕಾಪಾಡದೆ ಇದ್ದಲ್ಲಿ ೫೦ ರೂ ದಂಡ ವಿಧಿಸಲು ಸೂಚಿಸಿದೆ. ಮೊದಲು ಮನೆ ಮನೆಗೂ ಹೋಗಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆದಾದ ನಂತರು ಜನರು ಸ್ವಚ್ಛತೆ ಕಾಪಾಡದೇ ಇದ್ದಲ್ಲಿ ೫೦ ರೂ ದಂಡ ವಿಧಿಸಲಾಗುತ್ತಿದೆ. ಬಳಿಕ ಆ ಜಾಗ ಸ್ವಚ್ಛವಾಗುವವರೆಗೂ ದಿನಕ್ಕೆ ೧೫ ರೂ ದಂಡ ವಿಧಿಸಲು ತೀರ್ಮಾನಿಸಲಾಗಿದೆ.