Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಜೆಎಸ್‌ಎಸ್‌ ಮೈಸೂರು ಅರ್ಬನ್‌ ಹಾತ್‌ನಲ್ಲಿ 9ನೇ ಬಾರಿಗೆ ಗುಜರಾತ್‌ ಕರಕುಶಲ ಉತ್ಸವ

ಮೈಸೂರು: ಜೆಎಸ್‌ಎಸ್‌ ಮೈಸೂರು ಅರ್ಬನ್‌ ಹಾತ್‌ನಲ್ಲಿ 9ನೇ ಬಾರಿಗೆ ಗುಜರಾತ್‌ ಕರಕುಶಲ ಉತ್ಸವವನ್ನು ಆಯೋಜನೆ ಮಾಡಲಾಗಿದೆ.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಜೆಎಸ್‌ಎಸ್‌ ಮೈಸೂರು ಅರ್ಬನ್‌ ಹಾತ್‌ನಲ್ಲಿ ಸತತವಾಗಿ 9ನೇ ಬಾರಿಗೆ ವಿಶೇಷವಾಗಿ ದೇಶದ ಪ್ರಾಂತೀಯ ಮೇಳವಾದ ಗುಜರಾತ್‌ ಹ್ಯಾಂಡಿಕ್ರಾಫ್ಟ್‌ ಉತ್ಸವ-2024ನ್ನು ಜುಲೈ.5ರಿಂದ 14ರವರೆಗೆ ಆಯೋಜಿಸಲಾಗಿದೆ.

ಮೇಳದ ವಿಶೇಷತೆಗಳೆಂದರೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಕುಶಲಕರ್ಮಿಗಳು ಒಂದೇ ಸೂರಿನಡಿ ಕರಕುಶಲ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಾರೆ.

ಗುಜರಾತ್‌ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲರಾಗಿರುವ ಸುಮಾರು 70ಕ್ಕೂ ಹೆಚ್ಚು ಕುಶಲಕರ್ಮಿಗಳು ಮೇಳದಲ್ಲಿ ಭಾಗಿಯಾಗಲಿದ್ದಾರೆ. ಕುಶಲಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್‌ಶೀಟ್‌ಗಳು, ಟವಲ್‌ಗಳು, ಕುಶನ್‌ ಕವರ್‌ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್‌ ಮೆಟಿರೀಯಲ್‌ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಮೆಟಲ್‌ ವರ್ಕ್‌, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ.

ಜುಲೈ.5ರಂದು ಸಂಜೆ ಗುಜರಾತಿನ ಪ್ರಸಿದ್ಧ ಸಾಂಸ್ಕೃತಿಕ ಕಲಾ ತಂಡಗಳಿಂದ ಗರ್ಭಾ ನೃತ್ಯ ಪ್ರದರ್ಶನಗೊಳ್ಳಲಿದೆ. ಮೈಸೂರಿನ ಕಲಾ ರಸಿಕರು ಉಚಿತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇದೊಂದು ಸುವರ್ಣ ಅವಕಾಶವಾಗಿದೆ.

ಇನ್ನೂ ಈ ಮೇಳದ ವಿಶೇಷವೆಂದರೆ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಕಾರ್ಪೋರೇಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಸಕ್ತಿಯುಳ್ಳವರಿಗೆ ಗುಜರಾತಿನ ಪಾರಂಪರಿಕ ಕಲೆಯ ಬಗ್ಗೆ ತರಬೇತಿಯನ್ನು ಗುಜರಾತಿನ ಕುಶಲಕರ್ಮಿಗಳು ನೀಡಲಿದ್ದಾರೆ.

ಗುಜರಾತ್‌ ಹ್ಯಾಂಡಿಕ್ರಾಫ್ಟ್‌ ಉತ್ಸವದ ಉದ್ಘಾಟನೆಯನ್ನು ಜುಲೈ.5ರಂದು ಶುಕ್ರವಾರ ಸಂಜೆ 4 ಗಂಟೆಗೆ ಏರ್ಪಡಿಸಲಾಗಿದೆ. ಮೇಳದ ಉದ್ಘಾಟನೆಯನ್ನು ಶ್ರೀವಿದ್ಯಾ ಅವರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸಿ.ಜಿ.ಬೆಟಸೂರಮಠ ಅವರು ವಹಿಸಲಿದ್ದಾರೆ. ಈ ಮೇಳಕ್ಕೆ ಪ್ರವೇಶ ಉಚಿತವಾಗಿರಲಿದ್ದು, ಮೈಸೂರು ನಗರ ಬಸ್‌ ನಿಲ್ದಾಣದಿಂದ ಪ್ರತಿ ದಿನ ಬಸ್ಸುಗಳು ಜೆಎಸ್‌ಎಸ್‌ ಮೈಸೂರು ಅರ್ಬನ್‌ ಹಾತ್‌ಗೆ ಸಂಚರಿಸಲಿವೆ.

 

Tags: