Mysore
24
few clouds

Social Media

ಶನಿವಾರ, 31 ಜನವರಿ 2026
Light
Dark

KMFಯಿಂದ ೧ ಕೋಟಿ ಲೀಟರ್ ಹಾಲು ಉತ್ಪಾದನೆ : ಗೋಮಾತೆಗೆ ಸಿಎಂ ಪೂಜೆ

ಬೆಂಗಳೂರು : KMF ವತಿಯಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹ ಹಿನ್ನೆಲೆ  ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಭ್ರಮಾಚರಣೆಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಂಭ್ರಮಾಚರಣೆಯ ಅಂಗವಾಗಿ ಒಂದು ಕೋಟಿ ಹಾಲು ಶೇಖರಣೆ ಫಲಕಕ್ಕೆ ಬೆಲ್ ಹೊಡೆದು ಗೋಮಾತೆಗೆ  ಸಿಎಂ ಸಿದ್ದರಾಮಯ್ಯ ವಿಶೇಷವಾದ ಪೂಜೆ ಸಲ್ಲಿಸಿದರು.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಇದೇ ಜುಲೈನಲ್ಲಿ 90 ಲಕ್ಷ ಲೀಟರ್ ಪ್ರತಿ ದಿನ ಇತ್ತು. ಈ ವರ್ಷ ಒಂದು ದಿನಕ್ಕೆ 1 ಕೋಟಿ ಲೀಟರ್ ಉತ್ಪಾದನೆ ತಲುಪಿದ್ದೇವೆ. ಇದೊಂದು KMF ಇತಿಹಾಸದಲ್ಲಿ ಮೈಲಿಗಲ್ಲು. ನಾನು ಪಶುಸಂಗೋಪನೆ ಮಂತ್ರಿ ಸ್ವಲ್ಪ ದಿನ ಆಗಿದ್ದೆ. ಆಗ ಮಿಲ್ಕ್ ಯೂನಿಯನ್‌ಗೆ ಡೈರಿಗಳನ್ನ ಸೇರಿಸಿದ್ದೆವು. ನಮ್ಮಲ್ಲಿ ಈಗ 15 ಯುನಿಯನ್‌ಗಳು ಇವೆ. 15 ಡೈರಿಗಳು ಇವೆ. ಇವು ಹಾಲು ಮಾರಾಟ ಮಾಡುತ್ತವೆ ಎಂದು ತಿಳಿಸಿದರು.

ಈ ಸಂದರ್ಭ ಸಚಿವರಾದ ಚೆಲುವರಾಯಸ್ವಾಮಿ, ರಾಜಣ್ಣ, ಭೈರತಿ ಸುರೇಶ್‌, ಜಮೀರ್‌ ಅಹಮದ್‌ , ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯಕ್‌ ಮಾಜಿ ಸಂಸದ ಡಿಕೆ ಸುರೇಶ್‌ ಸೇರಿ ಇತರ ಶಾಸಕರು ಭಾಗಿಯಾಗಿದ್ದರು

Tags:
error: Content is protected !!