ನವದೆಹಲಿ: 23 ವರ್ಷದ ಹಳೆಯ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಮದಾ ಬಚಾವೋ ಆಂದೋಲನದ ಪ್ರಮುಖ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ದೆಹಲಿ ನ್ಯಾಯಾಲಯ ಐದು ತಿಂಗಳ ಸೆರೆವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ.
ಈಗಿನ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೆನಾ ಅವರು 23 ವರ್ಷಗಳ ಹಿಂದೆ ಮೇಧಾ ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ಇದನ್ನು ಪರಿಶಿಲೀಸಿದ ನ್ಯಾಯಾಲಯ ಮೇಧಾ ಅವರಿಗೆ ಐದು ತಿಂಗಳು ಸಜೆ ಹಾಗೂ ಹತ್ತು ಲಕ್ಷ ಪರಿಹಾರ ನೀಡುವಂತೆ ತೀರ್ಪು ನೀಡಿದೆ. ಜತೆಗೆ ಇದೇ ವೇಳೆ ಈ ಆದೇಶವನ್ನು 30 ದಿನಗಳ ಕಾಲ ಅಮಾನತ್ತಿನಲ್ಲಿರಿಸಿದ್ದು, ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಮೇಧಾ ಅವರ ಆರೋಗ್ಯ ಮತ್ತು ವಯಸ್ಸಿನ ಸ್ಥಿತಿಗತಿ ಅರಿತು ಒಂದು ಅಥವಾ ಎರಡು ವರ್ಷಗಳ ದೀರ್ಘಾವಧಿಯ ಶಿಕ್ಷೆಯನ್ನು ವಿಧಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿರುವುದಾಗಿ ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.





