Mysore
16
broken clouds

Social Media

ಮಂಗಳವಾರ, 06 ಜನವರಿ 2026
Light
Dark

ಸಾವಿರಾರು ಕೆಜಿ ಪ್ಲಾಸ್ಟಿಕ್‌ ವಶಪಡಿಸಿಕೊಂಡ ಮೈಸೂರು ಮಹಾನಗರ ಪಾಲಿಕೆ

ಮೈಸೂರು: ಪ್ರಿಂಟ್‌ ಬ್ಯಾಗ್‌ಗಳನ್ನು ಮುದ್ರಿಸುತ್ತಿದ್ದ ಮಳಿಗೆಗೆ ಭೇಟಿ ನೀಡಿದ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಾವಿರಾರು ಕೆಜಿ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ನಗರದ ವಲಯ ಕಚೇರಿ 1ರ ವ್ಯಾಪ್ತಿಯ ವಾರ್ಡ್‌ ನಂಬರ್.‌51ರ ಹರಿಶ್ಚಂದ್ರ ರಸ್ತೆಯಲ್ಲಿ ಬಹು ದಿನಗಳಿಂದ ನಾನ್‌ ಓವನ್‌ ಪ್ರಿಂಟ್‌ ಬ್ಯಾಗ್‌ಗಳನ್ನು ಮುದ್ರಿಸಲಾಗುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮೈಸೂರು ಪಾಲಿಕೆ ಅಧಿಕಾರಿಗಳು, ಅಲ್ಲಿದ್ದ 3710 ಕೆಜಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲಿಕೆ ಆಯುಕ್ತ ಆಶಾದ್‌ ಉರ್‌ ರೆಹಮಾನ್‌ ಷರೀಫ್‌, ಸಹಾಯಕ ಆಯುಕ್ತ ಮಂಜುನಾಥ್‌ ರೆಡ್ಡಿ, ಪಾಲಿಕೆ ಆರೋಗ್ಯ ಅಧಿಕಾರಿ ವೆಂಕಟೇಶ್‌, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಧುಕರ್‌, ಮೀನಾಕ್ಷಿ, ಜ್ಯೋತಿ ಸೇರಿದಂತೆ ಅನೇಕ ಪೌರ ಕಾರ್ಮಿಕರು ಭಾಗಿಯಾಗಿದ್ದರು.

ಈ ದಾಳಿಯ ಬೆನ್ನಲ್ಲೇ ಅಕ್ರಮವಾಗಿ ಪ್ಲಾಸ್ಟಿಕ್‌ ತಯಾರು ಮಾಡುತ್ತಿರುವ ಜನರಿಗೆ ನಡುಕ ಶುರುವಾಗಿದ್ದು, ಯಾವುದೇ ಕ್ಷಣದಲ್ಲಾದರೂ ಅಲ್ಲಿಗೆ ಮೈಸೂರು ಪಾಲಿಕೆ ಅಧಿಕಾರಿಗಳು ದಾಳಿ ನಡೆಸಬಹುದು ಎಂಬ ಆತಂಕ ಶುರುವಾಗಿದೆ.

ಈ ಮೂಲಕ ಸಾಂಸ್ಕೃತಿಕ ನಗರಿಯನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲು ಮೈಸೂರು ಪಾಲಿಕೆ ಹಗಲಿರುಳು ಶ್ರಮ ವಹಿಸುತ್ತಿದ್ದು, ಇದಕ್ಕೆ ಸಾರ್ವಜನಿಕರು ಕೂಡ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ.

 

Tags:
error: Content is protected !!