Mysore
20
few clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಇಂದಿಗೆ ಸೂರಜ್ ರೇವಣ್ಣ ಕಸ್ಟಡಿ ಅಂತ್ಯ : ಮಧ್ಯಾಹ್ನ ಕೋರ್ಟ್ ಗೆ ಹಾಜರ್

ಬೆಂಗಳೂರು : ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಆರೋಪಿ ಸೂರಜ್‌ ರೇವಣ್ಣ ಕಸ್ಟಡಿ ಇಂದಿಗೆ ಅಂತ್ಯವಾಗಿದೆ. ಇಂದು ಮಧ್ಯಾಹ್ನ ಕೋರ್ಟ್‌ ಗೆ ಸೂರಜ್‌ ನನ್ನ ಹಾಜರು ಪಡಿಸಲಿರೋ ಸಿಐಡಿ, ವಿಚಾರಣೆಗಾಗಿ ಮತ್ತೆ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಹೊಳೆನರಸೀಪುರ ಠಾಣೆಯ ಪೊಲೀಸರು ಜೂನ್‌ ೨೨ ರಂದು ಸೂರಜ್‌ ನನ್ನ ಬಂಧಿಸಿದ್ದರು.ನಂತರ ಸರ್ಕಾರ ಪ್ರಕರಣವನ್ನು ಸಿಐಡಿ ತಂಡಕ್ಕೆ ವಹಿಸಿತ್ತು. ಜೂನ್‌ ೨೩ ರಂದು ಸೂರಜ್‌ ನನ್ನ ಪೊಲೀಸರು ಕೋರ್ಟ್‌ ಗೆ ಹಾಜರು ಪಡಿಸಿ ೭ ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಇಂದಿಗೆ ಕಸ್ಟಡಿ ಅಂತ್ಯವಾಗಿದ್ದು, ಮಧ್ಯಾಹ್ನದ ವೇಳೆಗೆ ಸೂರಜ್‌ ರೇವಣ್ಣನನ್ನ ಕೋರ್ಟ್‌ ಗೆ ಹಾಜರು ಪಡಿಸಲಿದ್ದಾರೆ. ಇನ್ನು ಈಗಾಗಲೇ ಸಂತ್ರಸ್ತ ಯುವಕನ ಹೇಳಿಕೆ ದಾಖಲು ಮಾಡಲಾಗಿದ್ದು, ಸೂರಜ್‌ ರೇವಣ್ಣಗೂ ವೈದ್ಯಕೀಯ ಪರೀಕ್ಷೆ ಕೂಡ ನಡೆಸಲಾಗಿದೆ. ಆದರೆ ಸೂರಜ್‌ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಸಿಐಡಿ ತಂಡ ಆರೋಪಿಸಿದೆ.

Tags:
error: Content is protected !!