Mysore
18
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ವಿಶ್ವಕಪ್‌ ಗೆದ್ದ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ!

ನವದೆಹಲಿ: ದಶಕಗಳ ಕಾಲದ ಟ್ರೋಫಿ ಬರ ನೀಗಿಸಿದ ರೋಹಿತ್‌ ಶರ್ಮಾ ಅಂಡ್‌ ಟೀಂಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮ ತಂಡ ಚಾಂಪಿಯನ್ಸ್!, ನಮ್ಮ ತಂಡವು T20 ವಿಶ್ವಕಪ್ ಅನ್ನು ತನ್ನದೇ ಶೈಲಿಯಲ್ಲಿ ಮನೆಗೆ ತಂದಿದೆ! ಭಾರತ ಕ್ರಿಕೆಟ್ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ. ವಿಶ್ವಕಪ್‌ ಗೆದ್ದ ಈ ಪಂದ್ಯ ಐತಿಹಾಸಿಕವಾಗಿತ್ತು ಎಂದು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡು ಪ್ರಧಾನಿ ಮೋದಿ ಶುಭ ಕೋರಿದ್ದಾರೆ.

ಇದರೊಂದಿಗೆ ವೀಡಿಯೋ ತುಣುಕೊಂದನ್ನು ಹಂಚಿಕೊಂಡಿರುವ ಅವರು, ಟೀಂ ಇಂಡಿಯಾದ ಈ ಅದ್ಭುತವಾದ ಗೆಲುವಿಗೆ ಅಭಿನಂದನೆಗಳು. ಭಾರತ ಕೇವಲ ವಿಶ್ವಕಪ್‌ ಮಾತ್ರವಲ್ಲ ಕೋಟ್ಯಾಂತರ ಭಾರತೀಯರ ಮನಸ್ಸನ್ನು, ಹೃದಯವನ್ನು ಗೆದ್ದಿದ್ದಾರೆ.

ಈ ಟೂರ್ನಿಯಲ್ಲಿ ನಿಮ್ಮ ಸಾಧನೆ 140 ಕೋಟಿ ಭಾರತೀಯರು ನಿಮ್ಮ ಅದ್ಭುತ ಪ್ರದರ್ಶನಕ್ಕೆ ಹೆಮ್ಮೆ ಪಡುತ್ತಾರೆ. ಒಂದೇ ಒಂದು ಪಂದ್ಯವನ್ನು ಸೋಲದೇ ಇರುವುದು ಸಣ್ಣ ಸಾಧನೆಯಲ್ಲ. ಟೂರ್ನಿಯುದ್ದಕ್ಕೂ ನೀಡಿದ ಅಮೋಘ ಪ್ರದರ್ಶನಕ್ಕೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಟೀಂ ಇಂಡಿಯಾ ಸಾಧನೆಯನ್ನು ಬಣ್ಣಿಸಿದ್ದಾರೆ.

https://x.com/narendramodi/status/1807114429667975428

Tags:
error: Content is protected !!