ಬಾರ್ಬಡೋಸ್: 17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ.
ಪಂದ್ಯದ ನಂತರ ನಡೆದ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ನಿವೃತ್ತಿ ಘೋಷಿಸಿದರು. ಈ ಬಾರಿಯ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ರೋಹಿತ್ ಶರ್ಮಾ ಅವರು ಕೇವಲ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಮುಂದುವರೆಯುವುದಾಗಿ ಖಚಿತ ಪಡಿಸಿದರು. ಮತ್ತು ಟಿ20ಐ ನಿಂದ ದೂರ ಉಳಿಯವುದಾಗಿ ಅವರು ಘೋಷಿಸಿದ್ದಾರೆ.
ಇದು ನನ್ನ ಅಂತರಾಷ್ಟ್ರೀಯ ಟಿ20ಯ ಕೊನೆಯ ಪಂದ್ಯವಾಗಿತ್ತು. ಕೊನೆಯ ಪಂದ್ಯದಲ್ಲಿ ಟ್ರೋಫಿ ಗೆದ್ದ ಬಗ್ಗೆ ಹೇಳಲು ಪದಗಳಲ್ಲಿ ಆಗುತ್ತಿಲ್ಲ. ವಿದಾಯ ಹೇಳಲು ನನಗೆ ಇದಕ್ಕಿಂತ ಉತ್ತಮ ಸಮಯವಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಹೇಳಿದರು.
ಈವರೆಗೆ ಒಟ್ಟು 159 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 4,231 ರನ್ ಗಳಿಸಿದ್ದು, ಇದರಲ್ಲಿ 32 ಅರ್ಧಶತಕ ಹಾಗೂ 5 ಭರ್ಜರಿ ಶತಕಗಳು ಸೇರಿವೆ.
ಇನ್ನು ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ವಿರಾಟ್ ಅವರು ಮಾತನಾಡಿ ತಾವು ಅಂತರಾಷ್ಟ್ರೀಯ ಟಿ20ಯಿಂದ ದೂರ ಉಳಿಯುವುದಾಗಿ ಹಾಗೂ ಈ ಲೆಗೆಸಿಯನ್ನು ಮುಂದಿನ ಪೀಳಿಗೆ ಕೊಂಡೊಯ್ಯಬೇಕು ಎಂದು ಕೊಹ್ಲಿ ಹೇಳಿದರು.
ವಿರಾಟ್ ತಮ್ಮ ಜೀವನದ ಈವರೆಗೆ 125 ಪಂದ್ಯಗಳನ್ನಾಡಿದ್ದು, 4188ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧಶತಕ ಮತ್ತು 1 ಶತಕ ಒಳಗೊಂಡಿದೆ.