Mysore
26
overcast clouds

Social Media

ಭಾನುವಾರ, 10 ಮೇ 2026
Light
Dark

ಕೊಡಗು: ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

ಮಡಿಕೇರಿ: ಮಾರಾಟ ಮಾಡಲು ಗಾಂಜಾ ದಾಸ್ತಾನು ಇರಿಸಿದ್ದ ವ್ಯಕ್ತಿಯನ್ನು ಗೋಣಿಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೋಣಿಕೊಪ್ಪದ ಕಾವೇರಿ ಹಿಲ್ಸ್‌ನ ನಿವಾಸಿ ಅಬ್ದುಲ್ ಸಾಹಿಲ್ (22) ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿ 600 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್, ಒಂದು ಟ್ಯಾಬ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿರಾಜಪೇಟೆ ಉಪವಿಭಾಗ ಡಿಎಸ್‌ಪಿ ಆರ್. ಮೋಹನ್‌ಕುಮಾರ್, ಸಿಪಿಐ ಶಿವರಾಜ ಮುಧೋಳ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ರೂಪದೇವಿ ಬಿರಾದರ್, ಪಿಎಸ್‌ಐ ಕಾವೇರಪ್ಪ ಟಿ.ಎಂ. ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದರು. ಈ ವೇಳೆ ಮಾಲು ಸಮೇತ ಆರೋಪಿ ಬಂಧಿಸಿ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!