ಹಾವೇರಿ: ನಿಂತಿದ್ದ ಲಾರಿಗೆ ಟಿಟಿ (ಟೆಂಪೋ ಟ್ರಾವೆಲ್) ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ದಾರುಣವಾಗಿ ಮೃತರಾಗಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಶುಕ್ರವಾರ (ಜೂನ್.28) ಮುಂಜಾನೆ ಸಂಭವಿಸಿದೆ.
ಮೃತರೆಲ್ಲರೂ ಸಹಾ ಶಿವಮೊಗ್ಗ ಮೂಲದವರು ಎಂದು ಹೇಳಲಾಗಿದ್ದು, ಸವದತ್ತಿ ದೇವರ ದರ್ಶನಕ್ಕೆ ತೆರಳಿ, ಅಲ್ಲಿಂದ ವಾಪಸಾಗುವ ವೇಳೆ ಈ ಅಪಘಾತ ಸಂಭವಿಸಿದ್ದು, ಇದರಲ್ಲಿ 13 ಮಂದಿ ಮೃತರಾದರೇ ಓವರ್ವ ಬಾಲಕನಿಗೆ ಗಾಯಗಳಾಗಿದೆ. ಇನ್ನು ಆ ಬಾಲಕನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮುಂಜಾನೆ ಸುಮಾರು 4 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಊಹಿಸಲಾಗಿದ್ದು, ಸ್ಥಳಕ್ಕಾಗಮಿಸಿದ ಬ್ಯಾಡಗಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಸಿಕೊಂಡಿದ್ದಾರೆ.