Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ತುರ್ತು ಪರಿಸ್ಥಿತಿ; ಸಂವಿಧಾನದ ಮೇಲಿನ ನೇರ ದಾಳಿ: ಮುರ್ಮು

ಹೊಸದಿಲ್ಲಿ: ದೇಶದಲ್ಲಿ 1975 ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯೂ ಸಂವಿಧಾನದ ಮೇಲಿನ ನೇರ ದಾಳಿಯ ಕರಾಳ ಅಧ್ಯಾಯವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.

ಗುರುವಾರ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನವು ಕಳೆದ ದಶಕಗಳಲ್ಲಿ ಸವಾಲು ಮತ್ತು ಪ್ರತಿ ಪರೀಕ್ಷೆಯನ್ನು ಎದುರಿಸಿದೆ. 1975 ರ ತುರ್ತು ಪರಿಸ್ಥಿತಿಯಿಂದ ಇಡೀ ದೇಶವು ಆಕ್ರೋಶಗೊಂಡಿತ್ತು. ಅಂತಹ ಅಸಂವಿಧಾನಿಕ ಶಕ್ತಿಗಳ ವಿರುದ್ಧ ದೇಶವು ಜಯಶಾಲಿಯೂ ಆಯಿತು ಜತೆಗೆ ಗಣರಾಜ್ಯ ಮತ್ತಷ್ಟು ಬಲಿಷ್ಠಗೊಂಡಿತು ಎಂದು ಹೇಳಿದರು.

ಸಂವಿಧಾನವು ಕೇವಲ ಆಡಳಿತ ಮಾಧ್ಯಮವಲ್ಲ, ಬದಲಿಗೆ ಸಾರ್ವಜನಿಕ ಪ್ರಜ್ಞೆಯ ಭಾಗವಾಗುವುದನ್ನು ಖಚಿತಪಡಿಸಿಕೊಳ್ಳಲು ಮಾಡುತ್ತಿದೆ. ಈ ಉದ್ದೇಶ ಗಮನದಲ್ಲಿಟ್ಟುಕೊಂಡು, ನಮ್ಮ ಸರ್ಕಾರವು ನವೆಂಬರ್‌ 26 ಅನ್ನು ಸಂವಿಧಾನ ದಿನವಾಗಿ ಆಚರಿಸಲು ಆರಂಭಿಸಿದೆ ಎಂದು ಮುರ್ಮು ಹೇಳಿದರು.

ಉಪ ರಾಷ್ಟ್ರಪತಿ ಜನದೀಪ್‌ ಧನಕರ್‌ ಅವರು ಕೂಡ ತುರ್ತು ಪರಿಸ್ಥಿತಿಯ ಬಗ್ಗೆ ರಾಷ್ಟ್ರಪತಿ ಹೇಳಿಕೆಯನ್ನು ಪುನರುಚ್ಚರಿಸಿದ್ದು, ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನಡೆದ ದಾಳಿ ಎಂದರು.

ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಸಲಹೆಯಂತೆ 1975ರ ಜೂನ್‌ 25ರ ಮಧ್ಯರಾತ್ರಿ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು.

Tags: