Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನನ್ನ ಹನಿಟ್ರ್ಯಾಪ್‌ ನಡೆದಿಲ್ಲ, ಪರಿಚಿತರನ್ನು ಬ್ಲಾಕ್‌ ಮೇಲ್‌ ಮಾಡಿದ್ದಾರೆ: ಹರೀಶ್‌ಗೌಡ ಸ್ಪಷ್ಟನೆ

ಬೆಂಗಳೂರು: ನನ್ನ ಹನಿಟ್ರ್ಯಾಪ್‌ ನಡೆದಿಲ್ಲ. ಗೌರವಯುತವಾಗಿ ಬದುಕುತ್ತಿರುವ ನನ್ನ ಪರಿಚಿತರಿಗೆ ಹನಿಟ್ರ್ಯಾಪ್‌ ಮಾಡಿ, ಬ್ಲಾಕ್‌ಮೇಲ್‌ ಮಾಡಲಾಗುತ್ತಿತ್ತು ಎಂದು ಶಾಸಕ ಹರೀಶ್‌ ಗೌಡ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹನಿಟ್ರ್ಯಾಪ್‌ ಆಗಿಲ್ಲ. ಆದರೆ, ನನ್ನ ಕ್ಷೇತ್ರದಲ್ಲಿ 8 ರಿಂದ 10 ಜನರಿಗೆ ಹನಿಟ್ರ್ಯಾಪ್‌ ಮಾಡಿದ್ದಾರೆ. ಅವರೆಲ್ಲಾ ನನಗೆ ಪರಿಚಯಸ್ಥರೇ. ಅವರಲ್ಲಿ ಒಬ್ಬರು ನನಗೆ ಈ ಮಾಹಿತಿಯನ್ನು ತಿಳಿಸಿದ್ದರು. ಅವರೆಲ್ಲರೂ ಗೌರವಯುತವಾಗಿ ಬದುಕುತ್ತಿರುವವರು ಹೀಗಾಗಿ ದೂರು ನೀಡಿದ್ದೆ ಎಂದು ಹೇಳಿದರು.

ಮೈಸೂರು ಹಾಗೂ ಬೆಂಗಳೂರು ಎರಡು ಕಡೆಯೂ ಈ ರೀತಿಯ ತೊಂದರೆ ಕೊಡುವ ಕೆಲಸವಾಗುತ್ತಿತ್ತು. ಹಾಗಾಗಿ, ಬೆಂಗಳೂರು ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ದೆ. ದೂರಿನ ಅನ್ವಯ ಇಬ್ಬರನ್ನು ಬಂಧಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತರು ಮೈಸೂರಿನವರಾದ್ರೂ ಅವರು ಯಾರು ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಯಾವುದೇ ರಾಜಕೀಯ ಷಡ್ಯಂತ್ರ ನಡೆದಿಲ್ಲ ಎಂದರು.

ಆರೋಪಿಗಳ ವಿರುದ್ಧ ಕಾನೂನಾತ್ಮಕವಾಗಿ ಏನು ಆಗಬೇಕು ಅದು ಆಗುತ್ತದೆ. ಹಣಕ್ಕಾಗಿ ಬೇಡಿಕೆ ಇಟ್ಟು ಫೋಟೋ ಮನೆಗೆ ಕಳುಹಿಸುವುದಾಗಿ ಬೆದರಿಸಿದ್ರು. ಉದ್ಯಮಿಗಳು, ಪ್ರೋಫೆಸರ್‌ಗಳಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತನಿಖೆಯಿಂದ ಎಲ್ಲವೂ ಹೊರಬರಲಿದೆ ಎಂದರು.

Tags: