ಬೆಂಗಳೂರು : ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಕೊಡುತ್ತಿರುವ ತೀರ್ಥ ಚರಂಡಿ ನೀರು ಎಂದು ನಟ ಅನಿರುದ್ಧ ಆರೋಪಿಸಿದ್ದಾರೆ.
ಸುದ್ದಿಗಾರರೋಂದಿಗೆ ಮಾತನಾಡಿದ ಅವರು, ತುಂಗಾ ನದಿಗೆ ಚರಂಡಿ ನೀರು ಸೇರಿ ಕಲುಷಿತವಾಗಿದೆ. ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ನೀಡುತ್ತಿರುವ ತೀರ್ಥ ರೂಪದಲ್ಲಿ ನಾವೆಲ್ಲಾ ಕುಡಿಯುತ್ತಿರುವುದು ಈ ಚರಂಡಿ ನೀರನ್ನೇ ಎಂದು ಹೇಳಿದ್ದಾರೆ.
ಮುಂದುವರೆದಂತೆ ಹೇಳಿದ ಅವರು, ನನ್ನ ಚಿತ್ರದ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದೆ. ಆ ವೇಳೆ ಸ್ಥಳಿಯ ಪತ್ರಕರ್ತರು ತುಂಗಾ ನದಿ ಕಲುಷಿತದ ಬಗ್ಗೆ ನನಗೆ ಮಾಹಿತಿ ನೀಡಿದರು. ಬಳಿಕ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಚರಂಡಿ ನೀರು ನದಿಗೆ ಸೇರುತಿರುವುದು ಕಂಡು ಬಂತು.
ಇದೇ ನದಿ ಹರಿದು ಬಳ್ಳಾರಿ, ಮಂತ್ರಾಲಯಕ್ಕೂ ಹರಿದು ಹೋಗುತ್ತದೆ. ಹೀಗಾಗಿ ಮಂತ್ರಾಲಯದಲ್ಲಿ ನೀಡುತ್ತಿರುವ ತೀರ್ಥ ಚರಂಡಿ ನೀರು ಎಂದು ಆರೋಪಿಸಿದ್ದಾರೆ.
ನದಿ ಶುದ್ಧೀಕರಿಸಲು ಸಿಎಂಗೆ ಮನವಿ : ತುಂಗಾ ನದಿ ಕಲುಷಿತವಾಗಿದ್ದು ಕೂಡಲೆ ನದಿಯನ್ನು ಸ್ವಚ್ಛಗೊಳಿಸುವಂತೆ ನಟ ಅನಿರುದ್ಧ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.