ಮೈಸೂರು : ತುರ್ತು ಪರಿಸ್ಥಿತಿಯ ಪೋಸ್ಟರ್ ಅಭಿಯಾನವನ್ನು ಚಾಮರಾಜ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಕ್ಷೇತ್ರದ ವಾರ್ಡ್ ನಂ.4 ಲೋಕನಾಯಕ ನಗರದ ಬಸವನಗುಡಿ ವೃತ್ತದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್, ಲೋಹಿತ್ ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಅರ್ಜುನ್ ಕುಮಾರ್, ಪ್ರಧಾನ ಕಾರ್ಯದರ್ಶಿ ನಿಖಿಲ್, ಉಪಾದ್ಯಕ್ಷರಾದ ಪ್ರಶಾಂತ್, ಮಂಜು, ಗೌತಮ್, ದರ್ಶನ್,ಸೌಮ್ಯ, ಕಿರಣ್, ಯೋಗೇಶ್ ,ಕ್ಷೇತ್ರದ ರೈತ ಮೋರ್ಚಾ ಅಧ್ಯಕ್ಷರಾದ ಕುಮಾರ್ ಗೌಡ, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಹರೀಶ್ ಮತ್ತು ವಾರ್ಡಿನ ಬಿಜೆಪಿ ಮುಖಂಡರಾದ ಸತೀಶ್ ಕದಂಬ , ಶ್ರೀನಿವಾಸ್ ಗೌಡ್ರು, ದಿನೇಶ್, ಬಲರಾಮ, ಕೃಷ್ಣೇಗೌಡ, ದೇವೇಗೌಡ, ಅಕಿಲೇಶ್, ಕರಿಬಸಪ್ಪ,ಅಜಯ್, ನಿರಂಜನ್, ನಾಗಮಣಿ, ಶೋಭಾ ಮಂಗಳ, ಸತ್ಯವತಿ, ರಾಜೇಶ್ವರಿ, ಉಮಾ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.