Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಡಿಸಿಎಂ ಪಟ್ಟ ಉಳಿಸಿಕೊಳ್ಳಲು ಡಿ.ಕೆ‌ ಶಿವಕುಮಾರ್ ಒದ್ದಾಡುತ್ತಿರುವುದು ಶೋಚನೀಯ ; ಸಿ.ಟಿ ರವಿ

ದೆಹಲಿ: ಮೂರು ಡಿಸಿಎಂಗಳ ಬೇಡಿಕೆ ಅಸಲಿಗೆ ಈಗಿರುವ ಡಿಸಿಎಂಗೆ ಮೂಗುದಾರ ಹಾಕಲು ನಡೆಯುತ್ತಿರುವ ಹುನ್ನಾರ ಇದಾಗಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುರ್ಚಿಯ ಮೇಲೆ ಯಾರಿಗೆ ಕಣ್ಣಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಡಿ.ಕೆ ಶಿವಕುಮಾರ್‌ ಅವರೇ ಹೇಳಿದ್ದಾರೆ. ಹೈಕಮಾಂಡ್ ಜೊತೆ ನಡೆದ ಚರ್ಚೆ ಏನು ಅಂತ ತನಗೆ ಮತ್ತು ಸಿದ್ದರಾಮಯ್ಯನವರಿಗೆ ಮಾತ್ರ ಗೊತ್ತು, ಅದರ ಬಗ್ಗೆ ಯಾರೂ ಮಾತಾಡಬಾರದು ಎಂದು ಹೇಳಿದ್ದ ಅವರು ಈಗ ತಾವೇ ತಮ್ಮ ಡಿಸಿಎಂ ಪಟ್ಟ ಉಳಿಸಿಕೊಳ್ಳಲು ಒದ್ದಾಡುತ್ತಿರುವುದು ಶೋಚನೀಯವಾಗಿದೆ. ಡಿಸಿಎಂ ಶಿವಕುಮಾರ್ ಅವರ ಅಸಾಹಯಕತೆ ಆಶ್ಚರ್ಯ ಮೂಡಿಸುತ್ತದೆ, ಹೆಚ್ಚುವರಿ ಡಿಸಿಎಂಗಳು ಯಾರಾದರೂ ಮಾತಾಡಿದರೆ ಹುಷಾರ್ ಎಂದಿದ್ದ ಅವರ ಮಾತನ್ನು ಈಗ ಯಾರೆಂದರೆ ಯಾರೂ ಕೇಳುತ್ತಿಲ್ಲ ಎಂದು ಲೇವಡಿ ಮಾಡಿದರು.

Tags: