Mysore
28
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಿದೇಶಗಳಿಂದ 6.2 ಶತಕೋಟಿ ಡಾಲರ್‌ ಹೂಡಿಕೆ: ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ರಾಜ್ಯಕ್ಕೆ ಮತ್ತು ಇಲ್ಲಿನ ಕಂಪನಿಗಳಿಗೆ ಹೂಡಿಕೆ ಸೆಳೆಯುವ ಉದ್ದೇಶದಿಂದ ಐಟಿ ಬಿಟಿ ಇಲಾಖೆ ಜೂನ್‌ ಮಧ್ಯಭಾಗದಲ್ಲಿ ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದು ಫಲ ನೀಡುವ ಲಕ್ಷಣಗಳಿವೆ.

ವಿದೇಶಗಳಲ್ಲಿ ಕರ್ನಾಟಕದ ಸ್ಟಾರ್ಟಪ್‌ ಹಾಗೂ ಕಂಪನಿಗಳಿಗೆ ಹೂಡಿಕೆ ಸೆಳೆಯಲು ಮಾಡಿರುವ ರೋಡ್‌ ಶೋಗಳ ಪರಿಣಾಮ ಇದೀಗ 6.2 ಶತಕೋಟಿ ಅಮೆರಿಕನ್‌ ಡಾಲರ್‌ ಹೂಡಿಕೆಯನ್ನು ರಾಜ್ಯ ನಿರೀಕ್ಷಿಸುತ್ತಿದೆ. ಇದರ ಪರಿಣಾಮವಾಗಿ 35 ಸಾವಿರದಿಂದ 40 ಸಾವಿರ ಉದ್ಯೋಗ ಸೃಷ್ಟಿಯ ಭರವಸೆಯೂ ಮೂಡಿದೆ ಎಂದು ಅಂದಾಜಿಸಲಾಗಿದೆ.

ಎಲೆಕ್ಟ್ರಾನಿಕ್ಸ್‌, ಐಟಿ ಮತ್ತು ಬಿಟಿ ಇಲಾಖೆಯ ಅಧಿಕಾರಿಗಳು ಜೂನ್‌ ಮಧ್ಯಭಾಗದಲ್ಲಿ ರೋಡ್‌ ಶೋಗಳ ಮೂಲಕ ವಿವಿಧ ದೇಶಗಳೊಂದಿಗೆ ಹೊಸದಾಗಿ ಸಹಯೋಗವನ್ನು ಬೆಳೆಸಲು ಹಲವಾರು ನಗರಗಳಿಗೆ ಭೇಟಿ ನೀಡಿದ್ದರು.

6.2 ಬಿಲಿಯನ್‌ ಡಾಲರ್‌ ಹೂಡಿಕೆಯನ್ನು ನಿರೀಕ್ಷಿಸಲಾಗಿದ್ದು, ಉದ್ದೇಶಿತ ಜಾಗತಿಕ ಸಾಮರ್ಥ್ಯ ಕೇಂದ್ರಗಳು ರಾಜ್ಯದಲ್ಲಿ ಹಲವು ಉದ್ಯೋಗ ಸೃಷ್ಟಿಸಲಿವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಇನ್ನೂ ಮುಂದುವರಿದು ಮಾತನಾಡಿದ ಅವರು, ರೋಡ್‌ ಶೋಗಳ ಮುಖ್ಯ ಉದ್ದೇಶಗಳೆಂದರೆ ಕರ್ನಾಟಕದ ಜೈವಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್‌ ಪರಿಸರ ವ್ಯವಸ್ಥೆಯನ್ನು ವಿದೇಶಗಳಲ್ಲಿ ಪರಿಚಯಿಸುವುದಾಗಿದೆ. ಇದರಿಂದ ರಾಜ್ಯದಲ್ಲಿ ವಿದೇಶಿ ಹೂಡಿಕೆ ಹರಿದು ಬರಲು ಅನುಕೂಲವಾಗಲಿದೆ ಎಂದು ಹೇಳಿದರು.

 

Tags: